Sunday, February 26, 2012

ಇದು ಯಾರು ಬರೆದ ಕಥೆಯೋ ?

"ಪೂಜಾಕಾಲೆ ಸ್ವರ ವರ್ಣ ಮಂತ್ರ ತಂತ್ರ ದೋಷ ಪರಿಹಾರರ್ಥಂ ಪ್ರಾಯಶ್ಚಿತ್ತಾರ್ತಂ ಕರಿಷ್ಯೇ" ಅಂತ ದೇವರ ಮೇಲೆ ಒಂದು ಹೂವು ಹಾಕಿ ಆಚಮನ ಮಾಡಿ ಎದ್ದರು ರಾಂಭಟ್ರು.. ಗಂಭೀರ ವದನ, ಸುಮಾರು ೩೨ ವರ್ಷದ ಧೃಢಕಾಯದವರು, ಸುಬ್ಬಣ್ಣನ ಮನೆಯ ಸತ್ಯನಾರಾಯಣ ಪೂಜೆಗೆ ಹೊರಡಲು ತಯಾರಾದರು..
"ಅಬ್ಬೆ ಆಸ್ರಿಗೆ ಆತನೇ, ಎಂತ ಮಾಡಿದ್ಯೇ? "
" ಆತೋ ಮಾರೆಯ ಆತು.. ಅವತ್ತು ಸತ್ಯನಾರಾಯಣ ಪೂಜೆ ಅಲ್ದಾ, ಅವಲಕ್ಕಿ ಮಜ್ಜಿಗೆ ತಿನ್ಡ್ಕಂಡು ಹೋಗು.. ಮುಸುರೆ ಎಂತದೂ ಮಾಡಿದ್ನಿಲ್ಲೇ, ಯಾವಾಗೂ ನಾನೇ ಮಾಡಿ ಸಾಯವು.. ನನ್ನ ಹಣೆಬಾರನೆ ಇದು ಆಗೋತು " ಸ್ವಲ್ಪ ಜೋರಾಗೆ ಹೇಳಿದರು ತಾಯಿ. ಯಾಕೋ ಅಬ್ಬೆಗೆ ಸ್ವಲ್ಪ ಸಿಟ್ಟು ಬಂದಾಗೆ ಇದ್ದು ಹೇಳಿ ರಾಂ ಭಟ್ರು ಸುಮ್ಮನೆ ಸ್ವಲ್ಪ ಅವಲಕ್ಕಿ ಅದಕ್ಕೆ ಮಜ್ಜಿಗೆ ಹಾಕಿ ತಿನ್ನಲು ಅಡುಗೆ ಮನೆಗೆ ಹೋದರು..
ಅಡುಗೆ ಮನೆಯಲ್ಲಿ ಅಬ್ಬೆ ಒಬ್ಬಳೇ ಪಾತ್ರೆ ತೊಳೆಯುತ್ತಿದ್ದಳು.. ಬೆಳಕು ಸರಿಯಾಗಿ ಇರಲಿಲ್ಲ.. ಹಳೆ ಕಾಲದ ಮನೆ.. ಮುಖ ಗೋಡೆಯ ಕಡೆಗೆ ಇತ್ತು.. ಪಾಪ ಅದೇ ಕಟ್ಟೆ ಇರುವ ಜಾಗದಲ್ಲಿ ಪಾತ್ರೆ ಶಬ್ದ ಮಾಡುತ್ತಾ ಮಗನ ಬಂದಿದ್ದು ಗೊತ್ತಾದರೂ ಆ ಕಡೆ ಗಮನಿಸದಂತೆ ಏನೋ ಗೊಣಗುತ್ತಿದ್ದಳು.. ರಾಂಭಟ್ಟ ಇನ್ನೇನು ಅಲ್ಲೇ ತಗಡಿನ ಡಬ್ಬಿಯಲ್ಲಿ ಇದ್ದ ಅವಲಕ್ಕಿಯನ್ನ ಒಂದು ಪಾತ್ರೆಯಲ್ಲಿ ಹಾಕಿಕೊಂಡು ತೊಳೆದು ಕೊಳ್ಳಲು ಹೋದಾಗ ಅಬ್ಬೆಯನ್ನು ನೋಡಿ ವಿಷ್ಯ ಸ್ವಲ್ಪ ಅರ್ಥ ಆಯ್ತು..
" ಎಂತದೆ ಅಬ್ಬೆ ಅದು ದಿನಾ ಕರ್ಖರೆ ನಿಂದು, ನಾ ಎಂತ ಮಾಡವೆ ಈಗ, ಅಪ್ಪ ಮೊದಲಿಗೆ ನನ್ನ ಹಾಯ್ ಸ್ಕೂಲ್ ಮುಗಿದ ಮೇಲೆ ಕಾಲೇಜ್ ಗೆ ಕಳ್ಸಿದ್ರೆ ನಾನು ಏನೋ ಅಲ್ಪ ಸ್ವಲ್ಪ ಓದಿ ಒಳ್ಳೆ ಕೆಲ್ಸಕ್ಕೆ ಸೇರ್ಕತ್ತಿದ್ದೆ.. "
"ಹೌದ, ಆಗ ನಮ್ಮ ಪರಿಸ್ತಿತಿ ಹಂಗೆ ಇತ್ತು.. ಆ ಸುಬ್ಬಣ್ಣ ನಿಂಗೆ ಮಂತ್ರ ಹೇಳೇ ಕೊಟ್ಟದ್ದಕ್ಕೆ ನಿನ್ನ ಜೀವನಕ್ಕೆ ಒಂದು ಹಾದಿ ಆತು.. ಏನೋ ಸಣ್ಣ ತೋಟ ನೋಡ್ಕಂಡು ಇದ್ದೆ.  ಎಂಟು ದಿನ ಹೇಳಿ ಹಿಂಗೆ ಇರತ್ಯ? "
" ನಾನಾದರೂ ಎಂತ ಮಾಡುದೇ.?"
"ತಮ್ಮ ಹಂಗಾರೆ ಆ ಸುಬ್ಬಣ್ಣ ೪ ಜಾತಕ ಕಳ್ಸಿದ್ದ.. ಒಂದು ಜಾತಕ ಆಗ್ತು ಹೇಳಿದ್ದ "
" ಒವೆಲ್ಲ ಮನೇಲಿ ಇಪ್ಪ್ರೋವ್ರನ್ನ ಮದುವೆ ಆಗ್ತ್ವಿಲ್ಯೇ.. "
"ಅಲ್ದೋ ಒಂದು ಸಲ ಹೋಗಿ ಕೇಳ್ಕಂಡು ಬಾರಾ" 
"ಇಲ್ಲಿವರೆಗೆ ಎಷ್ಟು ಆತೆ? ನಂಗೂ ಹೋಗಿ ಹೋಗಿ ಸಾಕಾಗೋತು, ಎಲ್ಲೂ  ಹೆಣ್ಣು ನೋಡು ವರೆಗೇ ಬತ್ತಿಲ್ಲೆ. ಊರಲ್ಲಿ ಅಂದ ಕೂಡ್ಲೇ ಬೇಡ ಹೇಳ್ತೋ..ಇನ್ನು ಏನೋ ನಮ್ಮ ಆಸ್ತಿ ಇದ್ದು ಅಂದ್ರೆ, ಬಟ್ರು, ಮಡಿ ಮೈಲಿಗೆ ಜಾಸ್ತಿ, ಅತ್ತೆಬೇರೆ ಇದ್ದು. ಹೇಳ್ತೋ..ನಾವು ಮಾಡುವ ಉದ್ಯೋಗನೆ ನಮಗೆ ಕಂಟಕ"
"ಅಲ್ದೋ ಮಾಣಿ ನಿಂಗೆ ಮದುವೆ ಆಗವು ಅಂದ್ರೆ ನಾ ಇದ್ದದ್ದು ತಪ್ಪನ..? ಅವೆಲ್ಲ ಹಾಂಗೆ ಉದ್ಭವ ಅದವ? "
" ಎಲ್ಲ ಹಂಗೆಯೇ ಅಬ್ಬೆ ,, ನಮ್ಮಲ್ಲಿ ಗಂಡು ಮಕ್ಕೋ ಜಾಸ್ತಿ ಇದ್ದೋ.. ಹಣ್ಣು ಮಕ್ಕೋ ಕಡಿಮೆ ಆಜೋ.. ಎಲ್ಲರಿಗೂ ಸುಖದ ಜೀವನ ಬೇಕು ನೋಡು..ಮೈ ಬಗ್ಗಿಸಿ ದುಡಿಯುಲೇ ಆಗ್ತಿಲ್ಲೆ, ಅತ್ತೆ ಮಾವನ ಕಾಟ ಇಪ್ಪುಲೇ ಇಲ್ಲೇ.. ಅಲ್ದೆ, ಪಿ ಯು ಸಿ ಮಾಡಿದ ಹುಡ್ಗಿರು, ಇಂಜಿನಿಯರ್ ಆದೊವೆ ಬೇಕು ಹೇಳ್ತಾ.. ಅಂದ್ರೆ ನೀನೆ ಯೆಚನೆ ಮಾಡೇ.. ಇನ್ನು ನಮ್ಮಂತ ಭಟ್ಟನ ಯಾರು ಮದುವೆ ಆಗ್ತ್ವೆ? ಈಗೆಲ್ಲ ಬೇರೆ ವಿದೇಶದಲ್ಲಿ ಇದ್ದವೆ ಬೇಕು ಹೇಳುಲೇ ಶುರು ಮಾಡಿದ್ದೋ.. "
" ತಮ್ಮ ಹಂಗಾರೆ ಯಾವಾಗೋ ನೀನು  ಸಂಸಾರ ಹೇಳಿ ಮಾಡುದು..? ನಾ ಮೊಮ್ಮಕ್ಕಳನ್ನ ಅಡಸುದು..?"
" ಆ ಭಗವಂತ ಎಲ್ಲಿ ಹೆಂಡತಿ ಸೃಷ್ಟಿ ಮಾಡಿದನೋ ಗುತ್ತಿಲ್ಲೇ.. ಈಗೆಲ್ಲ ನಮ್ಮ ಜಾತಿ ಹೇಳಿ ಕುತ್ಕಂದ್ರೆ ಆಗ್ತಿಲ್ಲೆ..ಮೊನ್ನೆ ಆ ಕುಪ್ಪಣ್ಣ ಅದ್ಯಾವುದೋ ಲಿಂಗಾಯಿತ ಹುಡುಗಿ ತಂದಕಂಡು ಮದುವೆ ಆಜ್ನಿಲ್ಯ?
"ಹೌದು ನಂಗೂ ಗುತ್ತಾತು, ಶುಶೀಲ ಹೇಳ್ತಿತ್ತು..ಎಂತ ಅವನೇ ದುಡ್ಡು ಕೊಟ್ಟಿದ್ನದ..ಹೌದನ? "
"ಆದಿಕ್ಕು..ಮತ್ತೆ ಎಂತ ಮಾಡ್ತವೆ..? ಹುಡುಗಿ ನೋಡುಲೆ ಬ್ರಾಹ್ಮಣರ ಜಾತಿ ತರಹನೂ ಕಾಂತಿಲ್ಯೇ..ಗಂಡಿಗೆ ಒಂದು ಹೆಣ್ಣು ಅಷ್ಟೇ.."
"ಎಂತ ಕಾಲ ಬಂತೋ ಮಾರೆಯ"
"ಎಂತದೂ ಇಲ್ಲೇ ನಾನೂ ಇನ್ನು ೪ ಕಡೆ ನೋಡ್ತೆ ಕಡೆಗೆ ನಮಗೂ ಅದೇ ಗತಿ.."
"ನೋಡವನ ತಮ್ಮ ದೇವರಿದ್ದ.. ನೀ ಅವಲಕ್ಕಿ ಮಜ್ಜಿಗೆ ತಿನ್ಡ್ಕಂಡು ಹೊರಡು.. ಎಂತ ಮಾಡುಲೂ ಬತ್ತಿಲೆ.. ಹರೇ ರಾಮ ಹರೆ ರಾಮ, ಎಲ್ಲ ನೀನೆ ದಾರಿ ತೋರ್ಸವು.."

ಇದು ಬರಿ ರಾಮ್ ಭಟ್ಟರ ಕಥೆಯಲ್ಲ.. ಈಗಿನ ಕಾಲದ ಹವ್ಯಕರ ಮನೆಯಲ್ಲಿ ನಡೆಯುವ ನಿತ್ಯ ಕಥೆ.. ಇದಕ್ಕೆ ಪರಿಹಾರ ಏನು?

No comments:

Post a Comment