Friday, February 17, 2012

ಆ ಎರಡು ಹೆಜ್ಜೆಗಳು

ಸೋಮೆರು ಎಂಬ ಒಬ್ಬ ರೈತನಿದ್ದ.. ಆತ ದೈವಭಕ್ತನಾಗಿದ್ದ.. ತನ್ನ ಪ್ರತಿಯೊಂದು ಕೆಲಸದಲ್ಲೂ  ದೇವರನ್ನ ಕಾಣುತ್ತಿದ್ದ.. ಹೆಂಡತಿ ಮಕ್ಕಳೊಂದಿಗೆ ವ್ಯವಸಾಯದಲ್ಲಿ ತೊಡಗಿದ್ದ..
ಪ್ರತಿನಿತ್ಯ ಬೆಳಿಗ್ಗೆ ನದಿಯಲ್ಲಿ ಸ್ನಾನಮಾಡಿ ಅಲ್ಲೇ ಮರಳಿನಲ್ಲಿ ಇಷ್ಟ ದೇವರನ್ನ ಮಾಡಿ   ಪೂಜಿಸುತ್ತಿದ್ದ. ಇದು ತುಂಬಾ ವರ್ಷದಿಂದ ನಡೆಸಿಕೊಂಡು ಬಂದಿದ್ದ.. ಇತ್ತೀಚಿಗೆ ಪೂಜೆ ಮುಗಿಸಿ ಮನೆಗೆ ಹೊರಡುವಾಗ, ಅಕಸ್ಮಾತ್ತಾಗಿ ಹಿಂದೆ ನೋಡಿದ.. ಅಲ್ಲೊಂದು ಆಶ್ಚರ್ಯ ಕಾದಿತ್ತು.. ಈತನ ಹೆಜ್ಜೆ ಜೊತೆ ಇನ್ನೆರಡು ಹೆಜ್ಜೆಗಳು ಕಂಡವು.. ಸೋಮೆರುಗೆ ಇದು ಯಾರ  ಹೆಜ್ಜೆ ಅಂತ  ಅರ್ಥವಾಗಲಿಲ್ಲ.. ಅದೇ ಯೋಚನೆಯಲ್ಲೇ ಮನೆಗೆ ಬಂದು ಒಂದು ಮರದ ಕೆಳಗೆ ಕುಳಿತ.. ಹಾಗೆಯೇ ಗಾಢ ನಿದ್ರೆ ಬಂತು.. ನಿತ್ಯ ಪೂಜೆ ಮಾಡುತ್ತಿದ್ದ ಇಷ್ಟ ದೇವರು ಕಾಣಿಸಿಕೊಂಡ ..ಆಗ ಸೇಮೆರು ಈವತ್ತು ನೋಡಿದ ಆಶ್ಚರ್ಯ ಹೇಳಿದ.. ಆದಕ್ಕೆ " ಕಂದ, ನೀನು ನೋಡಿ ಇನ್ನೆರಡು ಹೆಜ್ಜೆಗಳು ನನ್ನವೇ, ನಾನು ಯಾವಾಗಲೂ ನಿನ್ನ  ಜೊತೆಗಿರುತ್ತೇನೆ."  ಅಂದ  . ಸುಮೆರುಗೆ ಅತ್ಯಂತ ಸಂತೋಷವೂ ಸಮಾಧಾನವೂ ಆಯಿತು. 
ಸ್ವಲ್ಪ ಸಮಯದ ನಂತರ ಹೆಂಡತಿ ಮಕ್ಕಳಿಗೆ ಯಾವುದೋ ಒಂದು ಖಾಯಿಲೆ ಬಂದು ಸುಮೆರುವಿನ ಸ್ತಿತಿ ಚಿಂತಾಜನಕವಾಯಿತು .. ಪ್ರತಿನಿತ್ಯ ದೇವರನ್ನ ಬೇಡಿಕೊಳ್ಳಲಾರಮ್ಭಿಸಿದ .. ಆಗ ಅವನಿಗೆ ದೇವರ ಮೇಲೆ ಅನುಮಾನ ಶುರುವಾಯ್ತು.. ಯಾಕೆ ದೇವರು ನನ್ನನ್ನ ನೋಡುತ್ತ್ತಿಲ್ಲ ಅನ್ನಿಸತೊಡಗಿತು.. ಹಾಗೆ ಮನೆಗೆ ಬರುವಾಗ ಹಿಂದೆ ದೇವರ ಹೆಜ್ಜೆ ಇದೆಯೇ ಅಂತ ಗಮನಿಸಿದ.. ಬರಿ ಇವನ ಹೆಜ್ಜೆ ಮಾತ್ರ ಕಾಣಿಸತೊಡಗಿತು.. ದೇವರ ಮೇಲೆ ಅತೀವ ಸಿಟ್ಟು ಬಂತು. "ನಾನು ನಿನ್ನನ್ನೇ ನಂಬಿದ್ದೇನೆ, ಆಗ ಸುಖವಾಗಿದ್ದೆ,  ಆಗ ನೀನು ನನ್ನ ಜೊತೆಗಿದ್ದೆ, ಈಗ ಕಷ್ಟದಲ್ಲಿರುವಾಗ ಎಲ್ಲಿಗೆ ಹೋದೆ..? ಇದು ನ್ಯಾಯನ " ಅಂತ ಗೋಗರೆಯತೊಡಗಿದ.. ಹಾಗೆ ಬಂದು ಮರದಕೆಳಗೆ ಕುಳಿತ.. ಗಾಢ ನಿದ್ರೆ.. ಆಗ ದೇವರು ಕಾಣಿಸಿಕೊಂಡ .. "ಏನು ಸ್ವಾಮಿ ಇದು ಸರಿನ..? ನಿನ್ನ ಹೆಜ್ಜೆಗಳೇ ಕಾಣಿಸುತ್ತಿಲ್ಲ.. ಈಗ ನಾನು ಕಷ್ಟದಲ್ಲಿದ್ದೇನೆ.. ನೀನು ಹೀಗೆ ನನ್ನನ್ನ ಮರೆಯಬಹುದ? " ಆಗ ದೇವರು " ಕಂದ, ಸಿಟ್ಟಾಗಬೇಡ, ಈಗ ನೀನು ನೋಡುತ್ತಿರುವ ಹೆಜ್ಜೆಗಳು ನಿನ್ನದಲ್ಲ, ಅವು ನನ್ನವೇ, ನಿನಗಿರುವ ಕಷ್ಟದಲ್ಲಿ ನೀನು ನಡೆಯಲೂ ಅಸಾಧ್ಯ ಅಂತ ನಿನ್ನನ್ನ ನನ್ನ ಹೆಗಲಮೇಲೆ ಹೊತ್ತುಕೊಂಡಿದ್ದೇನೆ. ಕಷ್ಟ ಯಾವಾಗಲೂ ಶಾಶ್ವತ ಅಲ್ಲ ಮಗು, ಕಳೆದ ಮೇಲೆ ಪುನಃ ಮೊದಲಿನಂತೆ ನಾನು ನಿನ್ನ ಜೊತೆಗಿರುತ್ತೇನೆ"
ಸುಮೆರುವಿಗೆ ಏನು ಹೇಳಬೋಕೋ ತಿಳಿಯಲಿಲ್ಲ..
 

No comments:

Post a Comment