ಹೊವ್ದು ಆಗೆಲ್ಲ ಪೇಟೆಯಿಂದ ಹೂ ತೆಕಂಡ್ ಬಂದ್ರೆ ಖರ್ಚು ಜಾಸ್ತಿ ಹೇಳಿ ಮನೆಯವೆಲ್ಲ ಸೇರಿ ಬೆಟ್ಟಕ್ಕೆ ಹೋಗಿ ಕೋಟೆ ಹೂ ಕೊಯ್ದು ಬರ್ತಿದ್ವಿ. ಮನೆಯ ಹೂ ಕೊಯ್ಯುವ ಜವಾಬ್ದಾರಿ ಸಣ್ಣ ಮಕ್ಕಳಿಗೆ, ಬೆಟ್ಟಕ್ಕೆ ಹೋಗಿ ಹೂ ತರುವ ಜವಾಬ್ದಾರಿ ದೊಡ್ಡವರಿಗೆ.
ನಮ್ಮ ಮನೆಯಲ್ಲಿ ಗಣಪತಿ ಕೂರಿಸ್ತಿರಲಿಲ್ಲ.. ಹಾಗಾಗಿ ನಾವೆಲ್ಲ ಚೌತಿಗೆ ಒಂದು ದಿನ ಮೊದಲೇ ಅಜ್ಜನ ಮನೆ ಸೆರ್ಕೊಳ್ತಿದ್ವಿ. ಹಿಂದಿನ ದಿನ ಫಲಾವಳಿ ಕಟ್ಟುವ ಕಾರ್ಯಕ್ರಮ.. ಯಾವ ಹಣ್ಣು ಕೆಳಗೆ ಕುಳಿತ ಭಟ್ಟರ ಮೇಲೆ ಬೀಳದಂತೆ ಕಟ್ಟಬೇಕು. ಟೊಮೆಟೋ ಕಟ್ಟುದೆ ಒಂದು ಸವಾಲಾಗಿತ್ತು. ಬೆಳಗಿನ ಜಾವ ಗಂಟೆಗೆ ಯೆದ್ದು ಬೆಟ್ಟಕ್ಕೆ ಹೋಗುದು.. ಅಲ್ಲಿ ಗೇರು ಮರ ಅಲ್ಲಿ ಇಲ್ಲಿ ಹಬ್ಬಿಕೊಂಡಿದ್ದ ಕೋಟೆ ಬಳ್ಳಿಯಿಂದ ಹೂ ಕೊಯ್ದು ತರುವುದೆ ಒಂದು ಮಜಾ ಕೊಡ್ತಿತ್ತು. ಅಡವಾಗಿ ಹೋದ್ರೆ ಬೆರೆಯವು ಬಂದು ಕೊಯ್ದು ಹೋಗ್ತಿದ್ರು. ಕಡಿಮೆ ಕಡಿಮೆ ಅಂದ್ರು ೪-೫ ಕೈಚೀಲ ತರಕ್ಕಾಗಿತ್ತು. ಹೂ ತಂದು ಆಮೆಲೆ ಗಣಪತಿ ತರುವುದು ನಮ್ಮ ಕೆಲಸ.. ಗಣಪತಿ ಯೆಲ್ಲ ಪ್ರತಿಷ್ಟಾಪನೆ ಆದಮೆಲೆ ತಂದ ಹೂವನ್ನ ಹಾರ ಮಾಡಿ ಗಣಪತಿ ಮುಂದೆ ಆ ಕಡೆ ೩ ಈ ಕಡೆ ೩ ಹಾರ ಹಾಕುದು..
ಹೀಗೆ ಒಂದು ಸಲ ಬೆಳಿಗ್ಗೆ ನಮ್ಮ ಗಡಿಯಾರ , ಅದೇ ಹಳೆಕಾಲದ ಕೀ ಕೊಡು ಗಡಿಯಾರ ಬಡ್ಕಂದ್ ಕೂಡ್ಲೆ ಯೆದ್ದು ತಯ್ಯರಾಗಿ ನಿನ್ನೆ ಇಟ್ಟಿದ್ದ ಕೈಚೀಲ ಕೊಕ್ಕೆ ಯೆಲ್ಲ ತೆಕಂಡು ಬೆಟ್ಟ ಹತ್ತಿ ಒಂದು ಕಡೆ ಕುಂತಿದ್ದೊ.. ಸ್ವಲ್ಪನಾದ್ರು ಬೆಳಕಾಗ್ಲಿ ಇಲ್ಲಂದ್ರೆ ಹೂ ಕಾಣಬೇಕಲ್ಲ.. ಕಾದಿದ್ದೆ ಕಾದಿದ್ದು.. ಸುಮಾರು ೨-೩ ಗಂಟೆ ಕಾದಿದ್ದು.. ಆಮೇಲೆ ಸ್ವಲ್ಪ ಬೆಳಗಾಯ್ತು.. ಅದ್ಯಾಕೆ ಹೀಗೆ ಅಂತ ತಿಳಿಲಿಲ್ಲ.. ಸರಿ ಹೂ ಕೊಯ್ದು ಬಂದು ಮನೆಯಲ್ಲಿ ಗಡಿಯಾರ ನೋಡಿದ್ರೆ ಯಾರೊ ಕಿಡಿಗೇಡಿಗಳು ಅಲಾರ್ಮ್ ೩ ಗಂಟೆಗೆ ತಿರುಗಿಸಿ ಇಟ್ಟಿಕ್ಕಿದ್ದೊ.. ಕೇಳಿದ್ರೆ ನಾನಲ್ಲ ನಾನಲ್ಲ..
ಚೌತಿ ಹಬ್ಬ ಬಂದಾಗಲೆಲ್ಲ ಇದು ಯಾಕೊ ನೆನಪಾಗುತ್ತದೆ..

No comments:
Post a Comment