Monday, February 13, 2012

ಭಾಗ್ಯದ ಲಕ್ಷ್ಮಿ ಬಾರಮ್ಮ

"ಭಾಗ್ಯದ  ಲಕ್ಷ್ಮಿ ಬಾರಮ್ಮ, ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ...." 

ಹೀಗೆ ಗೀತೆ ರಚಿಸಿ, ಹಾಡಿದರು ಪುರಂದರ ದಾಸರು . ಅದನ್ನ ನಮ್ಮ ಭಾರತರತ್ನ ಪಂಡಿತ್ ಭೀಮಸೇನ್ ಜೋಷಿ ಯವರ ಕಂಚಿನ ಕಂಠದಲ್ಲಿ ಜನ ಮನ ಮುಟ್ಟುವಂತೆ ಮನೋಜ್ಞವಾಗಿ ಹಾಡಿದರು..   
ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸೌಭಾಗ್ಯ ಲಕ್ಷ್ಮಿ , ಸಂತಾನ ಲಕ್ಷ್ಮಿ, ಹೀಗೆ ಹಲವಾರು ವಿಧದಿಂದ ನಾ ಆ ಲಕ್ಷ್ಮಿ ದೇವಿಯನ್ನ ಹಾಡಿ ಹೊಗಳುತ್ತಿದ್ದೇವೆ... ಹೇಗಾದರೂ ಮಾಡಿ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುವ  ಬಯಕೆಯಿಂದ ಮಾಡಬಾರದ ಕೆಲಸಕ್ಕೂ  ಕೈ ಹಾಕುತ್ತಾರೆ.. ಅದು ನ್ಯಾಯಸಂಮ್ಮತವೋ ಅಂತಲೂ ಯೋಚಿಸುವ ಗೋಜಿಗೆ ಹೋಗುವುದಿಲ್ಲ..ಅದೇನೇ ಇರಲಿ..ಬೇಡಿದವರಿಗೆ ಅಥವಾ ಪೂಜಿಸಿದವರಿಗೆ ಮಾತ್ರ ಆಕೆ ಧನ, ಕನಕ ಕರುಣಿಸುವುದಾದರೆ ಆಕೆ ಅವ್ರ ದಾಸಿಯಗಿರುತ್ತಿದ್ದಳೇನೋ..!  ಪೂಜಿಸದವರು ಉಪವಾಸ ಇರಬೇಕಾಗುತ್ತಿತ್ತೇನೋ..! ಮಾತೆಯ ದೃಷ್ಟಿಯಲ್ಲಿ  ಎಲ್ಲ ಮಕ್ಕಳೂ ಒಂದೇ.. ಎಲ್ಲರೂ ಸಮಾನರು.. 
ಎಂದಿನಂತೆ ಅಂದೂ ಕೂಡ ಬೆಳಿಗ್ಗೆ ಎದ್ದು "ಕರಾಗ್ರೆ ವಸತೇ ಲಕ್ಸ್ಮಿಕರಮಧ್ಯೇ ಸರಸ್ವತಿ ಕರಮೂಲೇ ಸ್ಥಿತೇ ಗೌರಿ ಪ್ರಭಾತೆ ಕರ ದರ್ಶನಂ" ಅಂತ ದೇವಿ ಸ್ತುತಿ ಮಾಡಿ " ಏನ್ ರಗೆಲೆ ಮಗಳಿಂದು  ಅಂತ ಗೊಣಗುತ್ತ  ನಿತ್ಯ ಕರ್ಮಗಳನ್ನ ಮುಗಿಸಿ ವಾಕಿಂಗ್ ಗೆ ಹೊರಡಲು ಅನುವಾದೆ.. 
"ರೀ ಇಂದು ಹಾಲು ತಗೊಂಡು ಬರಲ್ವ?" ಅಂತ ನನ್ನ ಶ್ರೀಮತಿ ಕೂಗಿ ದಿನದ ಕರ್ತವ್ಯವನ್ನ ನೆನಪಿಸಿದಾಗ  "ಇವಳಿಗೆ ಇದು ಈಗಲೇ ನೆನಪಾಗಬೇಕೆ" ಅಂದುಕೊಳ್ಳುತ್ತ, ಜೋಬಲ್ಲಿ ೫೦ ರು ಹಿಡಿದು ಹೊರಟೆ.  ಅಲ್ಲಿ ಹೋಗಿ ೨ ಲಿಟರ್ ಹಾಲು ಕೊಡಿ ಅಂದಾಗ ಅವನು ಹಾಲು ಕೊಟ್ಟು ೨ ರು ವಾಪಸ್ ಕೊಟ್ಟ . "ಇದೇನಯ್ಯ, ನಿನ್ನೆ ೮ ರು ವಾಪಸ್ ಕೊಟ್ಟಿದ್ದೆ, ಇವತ್ತೆನಯ್ಯ  ? ಚಿಲ್ಲರೆ ಇಲ್ವಾ?"
"ಏನ್ ಸರ್ ಹಿಂಗೆ ಹೇಳ್ತಿರ? ಇವತ್ತಿನಿಂದ ಹಾಲು ಲಿಟರ್ ಗೆ ೩ ರು ದಾಸ್ತಿ ಆಗಿಲ್ವ? ನೀವು ಟಿ ವಿ ಲಿ ನೋಡಿಲ್ವಾ? "ಅಂತ ನನ್ನನ ಒಳ್ಳೆ ಹಳ್ಳಿ ಗಮಾರನಂತೆ ನೋಡಿದ.. 
"ಹೊವ್ದೆನಯ್ಯ ?ನಂಗೆ ಗೊತ್ತೇ ಇರಲಿಲ್ಲ.. ನಿಂದೆ ಚಾನ್ಸು ಬಿಡು ಹಾಲಿಗೆ ೩ ರು ಲಾಭ " 
"ಎಲ್ಲಿ ಲಾಭ ಸ್ವಾಮಿ, ನಮಗೆ ಬರುವ ಲಾಭ ಅಷ್ಟೇ, ಅದ್ಯೇನೋ ರೈತರಿಗೆ ಹೋಗುತ್ತಂತೆ"  
"ಹೌದ? ಒಳ್ಳೇದಪ್ಪ " ಅಂತ ೨ ಲಿಟರ್ ಹಾಲು ಹಾಕೊಂಡು ಹೊರಟೆ.. 
ಹೌದು ಇದ್ಯಾಕೆ ಇದ್ದಕ್ಕಿದ್ದ ಹಾಗೆ ಹಾಲಿನ ರೇಟು ಜಾಸ್ತಿ ಆಯ್ತು? ಹೆಂಗಪ್ಪ ಬದುಕು ಸಾಗಿಸೋದು ಅಂತ ಯೋಚಿಸುತ್ತ ಬಂದೆ.. ನಾವೇನೋ ೨೪ ರು ಕೊಟ್ಟು ಹಾಲು ತಗೊತೀವಿ,, ಆದ್ರೆ ಅದೇ ರೈತನಿಗೆ ಎಷ್ಟು ಕೊಡ್ತಾರೋ? ಅಂತ ಯೋಚಿಸುತ್ತ ಬಂದೆ..
ಒಬ್ಬ ಹಸುವನ್ನು ಕರೆದುಕೊಂಡು ಕೈಲ್ಲಿ ಒಂದು ಸ್ಟೀಲ್ ಬಕೆಟ್ ಹಿಡಿದು ಹೋಗುತ್ತಿದ್ದ.. ಸರಿ ಕೇಳೆ ಬಿಡೋಣ ಅಂತ ಅವನನ್ನ ತಡೆದೆ. 
" ಏನಪ್ಪಾ ಈ ಹಸು ತಗೊಂಡು ಎಲ್ಲಿ ಹೋಗ್ತಿದ್ದಿಯ? "
"ಇಲ್ಲೇ ಡೈರಿಗೆ ಸ್ವಾಮಿ" ಸರಿಯಾದ ವ್ಯಕ್ತಿಯೇ ಸಿಕ್ಕ ಅಂದುಕೊಂಡೆ..
"ಏನು ಹಸುವಿನ ಜೊತೆಗೆ ಹೊರಟಿದ್ದೀಯ !"
" ಹುಂ ಸ್ವಾಮಿ ಅಲ್ಲೇ ಹಾಲು ಕರೆದು ಅವರಿಗೆ ಕೊಡ್ತೀನಿ.. ಫ್ರೆಶ್ ಇರಬೇಕಲ್ಲ ಸರ್.. ನೀರು ಹಾಕ್ತಿವಿ ಅಂತ ಕಂಪ್ಲೈಂಟ್ ಮಾಡ್ತಾರೆ ಅದಕ್ಕೆ ಅಲ್ಲೇ ಕರೆದು ಕೊಡ್ತೀನಿ.."
" ಎಷ್ಟು ಕೊಡ್ತಾರೆ ಲಿಟರ್ ಗೆ?"
"ಈ ತಿಂಗಳವರೆಗೆ ೧೯ ರು ಕೊಡ್ತಾರಂತೆ.. ಮುಂದಿನ ತಿಂಗಳಿಂದ ೨೨ ಕೊಡ್ತಾರಂತೆ..ಸ್ವಲ್ಪ ಸಮಾಧಾನ.. ಹುಲ್ಲಿನ ಬೆಲೆ ಬೇರೆ ಜಾಸ್ತಿ.. ಪೆಟ್ರೋಲ್ ರೇಟು ಜಾಸ್ತಿ ಅಂತ ನಮ್ಮ ಗಾಡಿಯವ  ಜಾಸ್ತಿ ಮಾಡ್ಬಿಟ್ಟ..ಈಗ ಮುಂದಿನ ತಿಂಗಳಿಂದ ಸ್ವಲ್ಪ ಲಾಭ ಬರಬಹುದು "
ಅಂದ್ರೆ ಬರಿ ನಮಗೆ ಕೊಡುವ ಹಾಲಿಗೂ ರೈತನಿಗೆ ಸಿಗಿವ ಹಾಲಿಗೂ ಬರೀ ೨ ರು ವ್ಯತ್ಯಾಸ .!!! 
ಈ ೨ ರು ಯಿಂದ,, ರೈತ ಕೊಟ್ಟ ಹಾಲಿನ ಶೇಖರಣೆ, ಸಾಗಾಟ , ಸಂಸ್ಕರಣೆ, ಶಿತಲೀಕರಣ, packing , ಪುನಃ ಗ್ರಾಹಕರಿಗೆ ಸಾಗಾಟ , ಮತ್ತೆ ಮಾರಾಟ, ಅವರ commission , ಇವೆಲ್ಲ ಸಾಧ್ಯನ ಅನ್ನಿಸ್ತು.. ಆಮೇಲೆ ಗೊತ್ತಾಗಿದ್ದು ರೈತ ಕೊಟ್ಟ ಹಾಲಿನಿಂದ ಅನೇಕ ರಾಸಯನಿಕಗಲನ್ನ ಬಳಸಿ, ಅದರಲ್ಲಿರುವ ಕೊಬ್ಬು ಬೇರ್ಪಡಿಸಿ ನಮಗೆ ಮಾರುತ್ತಾರೆ.. ಅದೇ ರೀತಿ ಇನ್ನು ಏನೇನೊ ಬಳಸಿ ಹಾಲು ಮೊದಲಿನ ಗಿನವನ್ನೇ ಉಳಿಸಿಕೊಳ್ಳುವಂತೆ ಮಾಡುತ್ತಾರೆ ಅಂತ.. ಬೇರ್ಪಡಿಸಿದ ಕೊಬ್ಬಿನಿಂದ ಇತರೆ ಉಪ ಉತ್ಪನ್ನಗಳನ್ನ ಮಾಡಿ ಮಾರಾಟ ಮಾಡುತ್ತಾರೆ.. ಇದರಿಂದ ಸಂಸ್ತೆಗೆ ಒಳ್ಳೆ ಲಾಭ ಬರುತ್ತದೆ ಎಂದು..ಹಾಗೆಯೇ ಹೊರಟೆ..ನಾವು ಕೊಟ್ಟ ಹಣ ಎಷ್ಟು ಜನರ ಹೊಟ್ಟೆ  ತುಂಬಿಸುತ್ತದೆ..? ಹಾಲಿನವನು ಮತ್ತು ಅವನ ಸಂಸಾರ, ಹುಲ್ಲುಮಾರುವವನು ಮತ್ತು ಅವನ ಸಂಸಾರ, ಗಾಡಿಯವನು  ಮತ್ತು ಅವನ ಸಂಸಾರ, ಹಾಲು ದೈರಿಯವರು ಮತ್ತು ಅವರ  ಸಂಸಾರ,  ನಂದಿನಿ heritage ಗಳಲ್ಲಿ ಕೆಲಸಮಾಡುವ ಸಹಸ್ರಾರು ಜನ ಉದರಪೋಷಣೆ, ಇನ್ನು ಸ್ವಲ್ಪ ಮುಂದುವರೆದರೆ, ಅವರು ಆ ಹಣವನ್ನ ಪುನಃ ಯಾವುದೋ ಸಾಮಾನು ಖರೀದಿಗೋ ಉಪಯೋಗಿಸಿ ಅಲ್ಲಿಂದ ಸುತ್ತು ಹಾಕಿ ಪುನಃ ಇನ್ನೊಬ್ಬ ರೈತನ ಸಂಸಾರ ನಡೆಯುತ್ತದೆ.. ಒಂದು ಸಲ ಯೋಚನೆ ಮಾಡಿದರೆ ಇವೆಲ್ಲ ಹೇಗೆ ಸಾಧ್ಯ ಅನ್ನಿಸುತ್ತೆ.. ಹಣ  ಹೇಗೆಲ್ಲ ತಿರುಗುತ್ತದೆ ಎಂಬುದೇ ಸೋಜಿಗ.. ಹಾಗೆಯೇ ಇದು ನಮ್ಮ ಪರಿವೆಯೂ ಇಲ್ಲದೆ ನಡೆಯುತ್ತಿರುತ್ತದೆ ಎಂಬುದು ಇನ್ನು ವಿಸ್ಮಯ ..


ಇದೇ ರೀತಿ ನಾವು ವ್ಯಯಿಸುವ ಪ್ರತಿಯೊಂದಕ್ಕೂ ಇದೇರೀತಿ ಸಂಬಂದ ಸಿಗುತ್ತದೆ.. ಹಣ ಅಥವಾ ಲಕ್ಷ್ಮಿ ಯಾವುದೇ ಕಾರಣಕ್ಕೂ ಒಬ್ಬರ ಆಸ್ತಿಯಾಗಿರಲು ಬಯಸುವುದಿಲ್ಲ .. ಒಂದು  ಚಕ್ರವನ್ನ ಗಮನಿಸಿದರೆ ಲಕ್ಷ್ಮಿ ಹಲವು ವರ್ಗದವರ ಮನೆಗೆ ಭೇಟಿ ನೀಡುವುದನ್ನ  ಕಾಣುತ್ತೇವೆ.. 

ನಮಗೆ ಇನ್ನು ಒಂದು ವಿಚಿತ್ರ ಅಂದ್ರೆ, ನೀವು ಹಲವಾರು ಕಡೆ ಓಡಾಡುತ್ತಿರಿತ್ತಿರ.. ಹೋದಲ್ಲಿ ಬಂದಲ್ಲಿ ಹಲವಾರು ಕಂಪನಿ ಗಳ ಜಾಹೀರಾತು,  ಅವುಗಳ ಉತ್ಪನ್ನಗಳನ್ನ ನೋಡುತ್ತಿರ..ಇದರಿಂದ ನಾವೇನು ಕಳಕೊಳ್ಳುವುದು ಎಂದು ಯೋಚಿಸಬೇಡಿ.. ನೀವು ಅದೇ ಚಿತ್ರವನ್ನ ಹಲವಾರು ಬಾರಿ ನೋಡಿದಾಗ ಅದು ನಿಮ್ಮ ಮನದಲ್ಲಿ ಅಚ್ಚುಒತ್ತಿ ಉಳಿಯುತ್ತದೆ.. ನಿಮ್ಮ ಜೀವನದಲ್ಲಿ ಅಂತಹದ್ದೇ ಒಂದು ವಸ್ತು ಯಾವಾಗಲಾದರು ಬೇಕಾಗಬಹುದು.. ಅದನ್ನ ಖರೀದಿಗೆ  ನೀವು ಅಂಗಡಿಗೆ ಹೋಗುತ್ತಿರ.. ಆಗ ಅಲ್ಲ್ಲಿ ನಿಮಗೆ ನಿಮಗೆ ಹಲಾವು ಕಂಪನಿ ಗಳ ವಸ್ತು ಕಾಣಬಹುದು ಆದ್ರೆ ನೀ ವು ಖರೀದಿಸುವ ಸಾಧ್ಯತೆ ಇರುವುದು ನೀವು ದಿನಾ ನೋಡುತ್ತಿರುವ ಜಾಹಿರಾತಿನ ಕಾಮಪ್ನಿಯ ವಸ್ತು.. ಆ ಜಾಹಿರಾತಿನ ನೆನಪಾಗಿ ಆ ವಸ್ತುವನ್ನು ಕೊಂಡರೆ ಆ ಜಾಹೀರಾತು ಹಾಕಿದವನ ಶಾಮಕ್ಕೆ  ಪ್ರತಿಫಲ ಸಿಕ್ಕಂತೆ.. ಅದರಿಂದ ಅದರ ಲಾಭ ಅದರ ಮಾರಾಟಗಾರರು ಜಾಹೀರಾತುದಾರರು, ಕಂಪನಿ, ನೌಕರರು.. ಕೊನೆಗೆ ಆ ಕಚ್ಚಾ ವಸ್ತು ಬೆಳೆದ ರೈತ ಹೀಗೆ ಸಾಗುತ್ತದೆ.. ಇದರಿಂದ ಒಬ್ಬ ಒಂದು ಚಿತ್ರ ನೋಡಿದ ಮಾತ್ರಕ್ಕೆ ಅವನು ಅವನ ಹತ್ತಿರ ಇದ್ದ ಹಣವನ್ನ ಎಲ್ಲಿ ದುಡಿಯುತ್ತಿದ್ದ ರೈತನಿಗೆ ಅದು ತಲುಪುವಂತೆ ಮಾಡುತ್ತೇನೆ ಅನ್ನುವ ಕಲ್ಪನೆ ಕೂಡ ಬರಲು ಅಸಾಧ್ಯ..      


ಇಲ್ಲಿ ಒಂದನ್ನ ನಾವು ಗಮನಿಸಬೇಕು... ಹೆಚ್ಚಿನ ಎಲ್ಲ ಚಲನೆಯಲ್ಲೂ ರೈತನ ಪಾತ್ರ ಇರುವುದನ್ನ ನೋಡುತ್ತೇವೆ.. ಆದರೂ ನಮ್ಮ ರೈತರ ಬದುಕು ಯಾಕೆ ಹೀಗೆ ಆಗುತ್ತಿವೆ..? 
ಇದರಲ್ಲಿ ಹಲವರು ನ್ಯಾಯಸಮ್ಮತವಾಗಿ ವ್ಯವಹರಿಸಿದರೆ ಕೆಲವರು ಅಡ್ಡದಾರಿ ಹಿಡಿಯುತ್ತಾರೆ.. ಬಲು ಬೇಗ ಶ್ರೀಮಂತರಾಗುವ ದುರಾಸೆ ಅವರಲ್ಲಿ ಇರುತ್ತದೆ.. ಯಾರು ಏನೆ ಸಂಪಾದಿಸಿದರೂ ಅದು ಯಾವುದೋ ಒಂದು ರೂಪದಲ್ಲಿ ಬೇರೆಯವರ ಕೈ ಸೇರಲೇ ಬೇಕು ಅಲ್ವ..? 




3 comments:

  1. ಚೆನ್ನಾಗಿದೆ ಗಣೇಶಣ್ಣ.. ಒಳ್ಳೆ ಬರವಣಿಗೆ.

    ReplyDelete
  2. ಗಣೇಶಣ್ಣ.... ಕೆಲವೊಂದು ವಿಷಯಗಳ ಬಗ್ಗೆ ನಮಗೆ ವಿಚಾರ ಶಕ್ತಿ ಇದ್ದರೂ ಗಮನ ಹರಿಸುವ ಗೋಜಿಗೆ ನಾವು ಹೋಗಾಗಿರತಿಲ್ಲೆ. ನಿನ್ನ ಲೇಖನ ಓದಿ ಹೌದಲ ಅನಿಸ್ತು.

    ReplyDelete
  3. ಚೆನ್ನಾಗಿ ವಿಮರ್ಶಿಸಿ ಬರದ್ದೆ ಗಣೇಶಣ್ಣ :)

    ReplyDelete