Friday, January 20, 2012

ಕನಸುಗಳು

ನನ್ನ ಸಹೋದ್ಯೋಗಿ ಇಂದು ಯಾಕೋ ನನ್ನ ವಿರುದ್ಧ ವಿನಾ ಕಾರಣ ರೇಗಾಡಿದ್ದ. ನಾನೂ ತುಂಬಾ ಹುಡುಕಾಡಿದೆ ನನ್ನ ತಪ್ಪಿಗಾಗಿ.. ಏನೋ ಸಣ್ಣ ಪುಟ್ಟ ತಪ್ಪುಗಳು ಕಾಣಿಸಿದವು .. ಆದ್ರೆ ಅದರಲ್ಲಿ ನನ್ನ ಪಾತ್ರ ಏನೂ ಇರಲಿಲ್ಲ.. ಅಂದು ನನ್ನ ಮನಸ್ಸಿಗೆ ತುಂಬಾ ನೋವು, ಬೇಸರ ಆಗಿತ್ತು.. ಅದೇ ಆಲೋಚನೆಯಲ್ಲೇ ಗಾಡಿ ಓಡಿಸಿಕೊಂಡು ಮನೆಗೆ ಬಂದೆ. ಹೆಂಡತಿ ಮಕ್ಕಳ ಜೊತೆ ಮಾತನಾಡುವ ಮನಸ್ಸಿರಲಿಲ್ಲ.. ಸುಮ್ಮ ಸುಮ್ಮನೆ ರೇಗುತ್ತಿದ್ದೆ.. ಪಾಪ ನನ್ನ ಮಗನೂ ಸಹ ಸಾಮಾನ್ಯ ಕಾರಣಕ್ಕೆ ಪೆಟ್ಟು ತಿಂದು ಅತ್ತ. ನನಗೆ ತುಂಬಾ ಸಂಕಟವಾಯಿತು.. ರಾತ್ರೆ ಎಲ್ಲ ಇದೇ ವಿಚಾರವಾಗಿ  ಬೇಸರಗೊಂಡು  ಮಲಗಿದ್ದೆ.. ತುಂಬಾ ಹೊತ್ತಾದರೂ ನಿದ್ದೆ ಬಂದಿಲ್ಲ.. ಕಣ್ಣು ಮುಚ್ಚಿದರೆ ಅದೇ ಯೋಚನೆ.. ಹೀಗೆ ಮಾಡಬಹುದಿತ್ತು.. ಹಾಂಗೆ  ಮಾಡಬಹುದಿತ್ತು.. ಎಂಬೆಲ್ಲ ಯೋಚನೆಗಳು.. ನಾಳೆ ಕಚೇರಿಗೆ ಹೋಗಬೇಕೆಂಬ ಜಾಗ್ರತ ಪ್ರಜ್ಞೆ ಇದ್ದರೂ ನಿದ್ದೆ ಮಾತ್ರ ಹತ್ತಿರ ಸುಳಿಯುತ್ತಿರಲಿಲ್ಲ . ಯಾಕೆ ಹೀಗೆ..? ಮನುಷ್ಯರು ಯಾಕೆ ಈರೀತಿ ವರ್ತಿಸುತ್ತಾರೆ..? ಎಂಬಿತ್ಯಾದಿ..
ಅದು ಯಾವಾಗ ನಿದ್ರೆ ಬಂತೋ ತಿಳಿಯಲಿಲ್ಲ.. ಬೆಳಿಗ್ಗೆ ಮಾಮೂಲಿ ಸಮಯದಲ್ಲೇ ಎಚ್ಚರ ಆಯ್ತು.. ಏನೋ ಕನಸು ಬಿದ್ದ ನೆನಪು.. ಯಾವ ಕನಸು ಎಂದು ಯೋಚನೆ ಮಾಡಿದರೂ ನೆನಪಿಗೆ ಬರಲಿಲ್ಲ.. ಸರಿ, ದಿನನಿತ್ಯದ ಕೆಲಸ ಮುಗಿಸಿ ಕಚೇರಿಯ ಕಡೆ ಮುಖ ಮಾಡಿದಾಗ ನಿನ್ನೆಯ ಘಟನೆ ನೆನಪಾಯ್ತು.. ಅದರ ಜೊತೆಗೆ ನಿನ್ನೆ ಬಿದ್ದ ಕನಸೂ ಅಲ್ಪ ಸ್ವಲ್ಪ ನೆನಪಾಯ್ತು.. ಅದು ನಿನ್ನ ನಡೆದ ಘಟನೆಗೆ ತೀರ ಹತ್ತಿರವಾಗಿತ್ತು.. ಆದರೆ ಸ್ತಳ ಪ್ರದೇಶ ಎರಡೂ ಬೇರೆ, ಅಷ್ಟೇ ಅಲ್ಲದೆ ಇನ್ನೂ  ಯಾರ್ಯಾರೋ ಇದ್ರೂ.. ಇದೆಲ್ಲ ಯೋಚಿಸಿದಾಗ ನನಗೆ ನಮ್ಮ ಮನಸ್ಸಿನ ಕಾರ್ಯವೈಖರಿ ಬಗ್ಗೆ ಕುತೂಹಲ ಜಾಸ್ತಿಯಾಯ್ತು.. ಈ ಕನಸುಗಳು ಯಾಕೆ ಬೀಳುತ್ತವೆ? ಅದಕ್ಕೂ ದೈನಂದಿನ ಜೀವನಕ್ಕೋ ಎಷ್ಟರ ಮಟ್ಟಿಗೆ ಸಂಬಂಧ.. ಜಾಗ್ರತ ಮನಸ್ಸು.. ಸುಪ್ತ ಮನಸ್ಸು.. ಇವುಗಳ ಬಗ್ಗೆ ಯೋಚಿಸತೊಡಗಿದೆ..
ಮುಖ್ಯವಾಗಿ ಕನಸು ಯಾತಕ್ಕೆ ಬೀಳುತ್ತವೆ..? ನಾವು ನಿದ್ರಾ ಸ್ತಿತಿಯಲ್ಲಿರುವಾಗ ನಮ್ಮ ಒಳಮನಸ್ಸಿನ ಆಲೋಚನೆಗಳೇ ಕನಸುಗಳು.. ಇದು ಕಥೆ, ಅಥವಾ ಹಳೆಯ ನೆನಪುಗಲೋ  ಅಥವಾ ಮುಂದೆ ಆಗುವ ಘಟನೆಗಳೂ ಇರುತ್ತವೆ.. ಇದು ಕೆಲವು ಸಲ ಮುದ ನೀಡಿದರೆ ಬಹುತೀಕ ಸಲ ಕಹಿ ಯಾಗಿರುತ್ತವೆ.. ಇನ್ನು ಅನಾರೋಗ್ಯ ಕಾಲದಲ್ಲಿ ಮನಸ್ಸು ದುರ್ಬಲ ವಾಗಿರುವ ಕಾರಣ, ಬೀಳುವ ಕನಸುಗಳು ಬಹುತೇಕ ಕೆಟ್ಟದ್ದಿರುತ್ತದೆ..
ಇನ್ನು ನಾವು ಗಾಡಿ ಓಡಿಸುವಾಗ ನಮ್ಮಲ್ಲಿ ಎಷ್ಟು ಜನ ನಮ್ಮ ಸಂಪೂರ್ಣ ಗಮನವನ್ನ ರಸ್ತೆಯ ಮೇಲೆ ಇತ್ತು ಗಾಡಿ ಓಡಿಸುತ್ತೇವೆ..? ಬಹುಶಃ ಹೊಸಬರು ಮಾತ್ರ.. ಹೆಚ್ಚಿನವರು ಬೇರೆ ಏನೋ ಯೋಚನೆ ಮಾಡುತ್ತಿರುತ್ತಾರೆ.. ಇದು ಸಾಮಾನ್ಯ.. ಆದ್ರೆ ಸಿಗ್ನಲ್ ಬಂದಾಕ್ಷಣ ನಮ್ಮ ಗಾಡಿ ನಿಲ್ಲುತ್ತದೆ,, ಬಿಟ್ಟ ತಕ್ಷಣ ಓಡುತ್ತದೆ.. ಅಡ್ಡಬಂದರೆ ಬ್ರೇಕ್ ಬೀಳುತ್ತದೆ.. ಖಾಲಿ ರಸ್ತೆ ಬಂದರೆ ವೇಗ ಜಾಸ್ತಿ ಆಗುತ್ತದೆ.. ಹೀಗೆ ಎಲ್ಲವೂ ನಾವು ತಿಳಿದು ಮನವರಿಕೆ ಮಾಡಿಕೊಂಡು ಮಾಡುವುದಲ್ಲ.. ಹಾಗಿದ್ದರೆ ಇದು ಹೇಗೆ? ಇದು ಯಾವುದರಿಂದ ನಿಯಂತ್ರಿಸಲ್ಪಡುತ್ತದೆ..? ಅಂದ್ರೆ ಇದು ಬಹುಶ ನಮ್ಮ ತಾತ್ಕಾಲಿಕ ಮನಸ್ಸಿನಲ್ಲಿ ನಡೆಯುವ ನಿತ್ಯ ಕ್ರಿಯೆಗಳು..  ಇದೂ ಒಂದು ರೀತಿ  ಹಗಲುಗನಸೇ?


ಮನಸ್ಸಿನ ಕಾರ್ಯ ವೈಖರಿ ಎಷ್ಟು ವಿಚಿತ್ರ?  ಒಬ್ಬಂಟಿಯಾಗಿದ್ದಾಗ ನಮ್ಮಸ್ತಕ್ಕೆ ನಾವೇ ಏನೇನೊ ಆಲೋಚಿಸುತ್ತಿರುತ್ತೇವೆ.. ನಮ್ಮ ಅವಯವಗಳೂ ಅದಕ್ಕೆ ಸರಿಯಾಗಿ ಸ್ಪಂದಿಸುತ್ತಿರುತ್ತವೆ.. ಅದೇ ಬೇರೆ ಯಾರಾದರೂ ಆ ಸಮಯದಲ್ಲಿ ಬಂದರೆ ತಕ್ಷಣ ನಿಂತು ಹೋಗುತ್ತವೆ..

ಎಷ್ಟು ವಿಚಿತ್ರ ಈ ಕನಸುಗಳು..?

1 comment:

  1. ಹೌದು ಗಣೇಶಣ್ಣ.. ನಮ್ಮ ಮನಸ್ಸು ಯಾವ ರೀತಿ ಕಾರ್ಯ ನಿರ್ವಹಿಸ್ತು ಅಂತ ಪೂರ್ತಿಯಾಗಿ ತಿಳ್ಕಂಬಲೆ ಇನ್ನೂ ರಾಶಿ ವರ್ಷ ಬೇಕಾಗ್ತೇನ.. ಅಥವಾ ತಿಳ್ಕಂಬಲಾಗ್ತಿಲ್ಯೇನ.. ಯಾರಿಗ್ಗೊತ್ತು? ನಾನೂ ಹಿಂದೆ ಇದೇ ವಿಷಯದ ಮೇಲೆ ಒಂದು ಲೇಖನ ಬರೆದಿದ್ದಿ.. ಅದು ನೆನಪಾತು :)
    http://mgharish.blogspot.com/2010/03/human-brain-and-cpu.html

    ReplyDelete