ಜನವರಿ ೨೬ ಬಂದ್ರೆ ಸಾಕು ನಮಗೆ ಎಲ್ಲಿಲ್ಲದ ಸಡಗರ. ನಮಗೆ ಚೌತಿ ಹಬ್ಬವೂ ಒಂದೇ ಜನವರಿ ೨೬ ಒಂದೇ.. ಹೌದು.. ನಾವು ಓದುತ್ತಿದ್ದುದು ಒಂದು ಹಳ್ಳಿಯ ಕನ್ನಡ ಪ್ರಾಥಮಿಕ ಶಾಲೆ. ನಮ್ಮ ಮನೆಯಿಂದ ಸುಮಾರು ೧ ಕಿ ಮಿ ದೂರ.. ಮಾರುಕೇರಿ ಎಂಬ ಗ್ರಾಮ.. ಅಲ್ಲಿ ೭ ನೆ ತರಗತಿ ವರೆಗೆ ವ್ಯಾಸಾಂಗ ಮಾಡಬಹುದಿತ್ತು.. ಅದರ ನಂತರ ಹೈ ಸ್ಚೂಲ್ಗೆ ಹೋಗಬೇಕಿತ್ತು..
ಜನವರಿ ೨೫ ರ ಮಧ್ಯಾನ್ಹವೇ ಶಾಲೆಗೇ ಹೆಚ್ಚು ಕಡಿಮೆ ರಜೆ ಲೆಕ್ಕ.. ಪಾಠ ಇರುತ್ತಿರಲಿಲ್ಲ.. ಶಾಲೆಯನ್ನ ತಳಿರು ತೋರಣಗಳಿಂದ ಸಿಂಗರಿಸಬೇಕು ಎನ್ನುವ ಉತ್ಸಾಹ.. ಮಧ್ಯಾನ್ಹ ಮನೆಗೆ ಬಂದು ಊಟ ಮುಗಿಸಿ ಓದುತ್ತಿದ್ದೆವು.. ೬-೭ ಜನರ ಗುಂಪು ಮಾಡಿಕೊಂಡು ಯಾರ್ಯಾರದ್ದೋ ಮನೆ ತೋಟ, ಹಳ್ಳ, ಬೇಲಿ ಎಲ್ಲ ಕಡೆ ಸುತ್ತಿ ಒಂದಿಷ್ಟು ಅಲಂಕಾರಿಕ ಗಿಡಗಳು, ತೇರು ಹೂವು, ಬಣ್ಣ ಬಣ್ಣದ ಎಲೆಗಳಿರುವ ಗಿಡಗಳಲ ಕೊಂಬೆಗಳನ್ನ ಮುರಿದು ತರ್ತಾ ಇದ್ದೆವು.. ಅದನ್ನೆಲ್ಲ ಒಂದು ಮಾಲೆ ತರಹ ಮಾಡಿ ಶಾಲೆಯ ಸುತ್ತೆಲ್ಲ ಕಟ್ಟುತ್ತಿದ್ದೆವು..ಅಂತೂ ಸಾಯಂಕಾಲ ೬-೭ ಗಂಟೆವರೆಗೆ ಎಲ್ಲ ತಯಾರು ಮಾಡಿ ಮನೆಗೆ ಹೋಗ್ತಾ ಇದ್ವಿ. ಮನೆಗೆ ಹೋದರೆ ನಾಳೆ ಗಣರಯೋತ್ಸವದ್ದೆ ಚಿಂತೆ.ಇದೆ ಗುಂಗಿನಲ್ಲೇ ಮಲ್ಗಿರುತ್ತಿದ್ವಿ.
ಬೆಳಗಾಗೆದ್ದು ಬೇಗ ತಯಾರಾಗಿ ೬.೩೦ ಕ್ಕೆಲ್ಲ ಶಾಲೆಯಲ್ಲಿ ಹಾಜರ್.. ಬರುವಾಗ ಹೂವುಗಳು, ವಿಶೇಷವಾಗಿ ಧ್ವಜದ ಕಟ್ಟೆ
ಅಲಂಕಾರಕ್ಕೆ, ಯೆಜ್ಲು ಅಂತ ಒಂದು ಮರದ ಹೂವು , ಮತ್ತೆ ಬಾವುಟದ ಒಳಗೆ ಹಾಕಲಿಕ್ಕೋ ಹೂವುಗಲನ್ನ ತರ್ತ ಇದ್ವಿ. ಸುಮಾರು ಹುಡುಗರು ತಬ್ದ ಹೂವುಗಳನ್ನ ಸುಂದರವಾಗಿ ಧ್ವಜದ ಕಟ್ಟೆಯನ್ನ ಅಲಂಕರಿಸಿ, ಧ್ವಜದ ಒಳಗೆ ಹೂವು ಹಾಕಿ ಅದನ್ನ ಕಟ್ಟುವ ರೀತಿ ಕಟ್ಟಿ ಮೇಲಕ್ಕೆ ಕಟ್ಟುತ್ತಿದ್ದೆವು.. ಇದೆಲ್ಲ ನಮ್ಮ ಮಾಸ್ತರರ, ಅಕ್ಕೋರ ಸಮ್ಮುಖದಲ್ಲೇ ನಡೀತಿತ್ತು.. ನಮಗೆ ಶಾಸ್ತ್ರಿ ಮಾಸ್ತರರು(ಈಗ ಇಲ್ಲ, ಸ್ವರ್ಗಸ್ತರಾಗಿದ್ದಾರೆ) , ಗಿರಿಜಾ ಅಕ್ಕೋರು, ಜಯಲಕ್ಷ್ಮಿ ಅಕ್ಕೋರು.. ಇವರ ಉಪಸ್ತಿತಿಯಲ್ಲಿ ನಡೀತಿತ್ತು.. ಕಾರ್ಯಕ್ರಮಕ್ಕೆ ಒಬ್ಬರು ಅಧ್ಯಕ್ಷರು ಬೇಕಲ್ಲ .. ಅದಕ್ಕಾಗಿ ನಮ್ಮ ನೆರೆಮನೆಯವರಾದ ಟಿ ಎಸ ಭಟ್ಟರೇ ನಮ್ಮ ಶಾಲೆಯ ಖಾಯಂ ಅಧ್ಯಕ್ಷರು.. ಅಂತೂ ೭:೩೦ ಅ ಸುಮಾರಿಗೆ ಅಧ್ಯಕ್ಷರಿಂದ ಧ್ವಜಾರೋಹಣ, ಆಮೇಲೆ ಜನಗಣ ಮನ, ನಮ್ಮ ಶಾಸ್ತ್ರೀ ಮಾಸ್ತರರಿಂದ ಪ್ರಾಸ್ತಾವಿಕ ಮಾತು, ಆಮೇಲೆ ಅಧ್ಯಕ್ಷರಿಂದ ನಾಲ್ಕಾರು ಹಿತವಚನಗಳು, .. ಅದು ಮುಗಿದ ಮೇಲೆ ಮಕ್ಕಳು ಯಾರದ್ರೂ ಭಾಷಣ ಮಾಡುವವರಿದ್ದರೆ ಅವರ ಭಾಷಣ.. ನಾನೂ ಸಾಧಾರಣವಾಗಿ ಭಾಷಣ ಮಾಡುತ್ತಿದ್ದೆ.. ಆದ್ರೆ ಆ ಸಲ ನನಗೆ ನನ್ನ ಅಪ್ಪಚ್ಚಿ ಎಲ್ಲ ಸೇರಿ " ಹೇ ಏನಂತ ಕನ್ನಡದಲ್ಲಿ ಭಾಷಣ ಮಾಡ್ತ್ಯ? ಇಂಗ್ಲಿಷ್ ನಲ್ಲಿ ಭಾಷಣ ಮಾಡವ" ಹೇಳಿ ಒಂದು ಪೇಜು ಇಂಗ್ಲಿಷ್ ಭಾಷಣ ಬರೆದು ಕೊಟ್ರು.. ನಾನೂ ಸುಮಾರು ಒಂದು ವಾರದಿಂದ ಬಾಯಿಪಾಠ ಮಾಡಿ ತಯಾರಾದೆ.. ಸರಿ ಇನ್ನೇನು ಭಾಷಣದಲ್ಲಿ ನನ್ನ ಹೆಸರೂ ಇತ್ತು.. ಶಾಸ್ತ್ರಿ ಮಾಸ್ತರರು ನನ್ ಕರೆದರು,.. ನನಗೆ ಭಯ.. ಅದರೂ ಹೆಂಗೋ ಹೋಗಿ ನಿಂತು ಶುರು ಮಾಡ್ಕಂಡೆ.. ಎಲ್ಲರಿಗೂ ನಾ ಏನು ಹೇಳ್ತಾ ಇದ್ದೇನೆ ಅಂತಾನೆ ಅರ್ಥ ಆಗಿಲ್ಲ (ನಂಗೂ ಸಹ). ನಮ್ಮ ಅಧ್ಯಕ್ಷರು ಏನೋ ಹೇಳ್ತಿದ್ದರು.. ಅದು ನನ್ನ ಕಂಠ ಪಾಠ ಕ್ಕೆ ತೊಂದ್ರೆ ಆಯ್ತು.. ಏನು ಅಂತ ಕೇಳಿದೆ.. ಏನಿಲ್ಲ ನೀ ಮುಂದುವರೆಸ ಅಂದ್ರು.. ಸರಿ ಶುರು ಮಾಡಿದ ಮೇಲೆ ಮುಗಿಸಬೇಕಲ್ಲ.. ಪುನಃ ಮೊದಲಿನಿಂದ ಶುರು ಮಾಡಿ, ಮುಗಿಸಿದೆ.. ಯಾರಿಗೆ ಏನು ಅರ್ಥ ಆಯ್ತೋ ಗೊತ್ತಿಲ್ಲ.. ಅಂತೂ ಒಂದಿಸ್ತು ಚಪ್ಪಾಳೆ ಬಂತು.. ಕೊನೆಗೆ ಒಂದು ಸಣ್ಣ ವಂದನಾರ್ಪಣೆ., ಅದೇ ಸಮಯಕ್ಕೆ ನಮಗೆಲ್ಲ ಚಾಕಲೇಟ್ ಹಂಚಿದರು..
ಮುಂದಿನದೇ ಪ್ರಭಾತ್ ಪೇರಿ.. ಎಲ್ಲ ಸಾಲಾಗಿ ರಸ್ತೆಯ ಇಕ್ಕೆಡೆಗಳಲ್ಲಿ, ಒಂದು ಸಾಲಿನಲ್ಲಿ ಹುಡುಗರೂ ಇನ್ನೊಂದು ಸಾಲಿನಲ್ಲಿ ಹುಡುಗಿಯರೂ ನಿಂತು ಅದಕ್ಕೆ ಮುಂದಾಳಾಗಿ ನಮ್ಮ ಶಾಸ್ತ್ರಿ ಮಾಸ್ತರರು ಇರ್ತಿದ್ರು.. ನಮ್ಮ ಯಾತ್ರೆ ಅಲ್ಲಿಂದ ಸುಮಾರು ೧ ಕಿ ಮಿ ದೂರದ ಗುಡ್ಡೆ ಕಟ್ಟೆ ವರೆಗೆ ನಡೀತಿತ್ತು.. ಸರಿ,, " ಬ್ಹೊಲೋ ಭಾರತ್ ಮಾತಾಕಿ,""ಸುಭಾಶ್ ಚಂದ್ರ ಭೋಸ್ ಕಿ" ಮಾಹಾತ್ಮ ಗಾಂಧೀಜಿ ಕಿ " ಜೈಕಾರ ದೊಂದಿಗೆ ನಮ್ಮ ಪೇರಿ ಹೊರಟಿತು.. ಮೊದಲು ಬರುತ್ತಿದ್ದುದು ವಾಸು ಅಂಗಡಿ.. ಅವರು ಎಲ್ಲ ಮಕ್ಕಳಿಗೂ ಒಂದೊಂದು ಪೆಪ್ಪರ್ ಮೆಂಟ್ ಕೊಡ್ತಿದ್ದರು.. ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ.. ಆಮೇಲೆ ನನ್ನ ಚಿಕ್ಕಪ್ಪನ ಅಂಗಡಿ ಅವನೂ ಸಹ ಎಲ್ಲರಿಗೂ ಲಿಂಬೆ chocolete ಕೊಡುವ ಸಂಪ್ರದಾಯ ಇಟ್ಟುಕೊಂಡಿದ್ದ.. ಅದನ್ನ ಸ್ವಾಹ ಮಾಡಿ ಗುಡ್ಡೆ ಕಟ್ಟೆ ವರೆಗೆ ಭೇಟಿ ನೀಡು ಅಲ್ಲಿಂದ ವಾಪಸ್ ಬರ್ತಿದ್ವಿ.. ಕೊನೆಗೆ ಶಾಲೆಗೇ ಬಂದು ಅಲ್ಲಿಗೆ ಕಾರ್ಯಕ್ರಮ ಮುಕ್ತಾಯವಾಗ್ತಿತ್ತು .. ಬಳಲಿಬೆನ್ದಗ್ತಾ ಇದ್ವಿ.. ಹಲವರು ಮಧ್ಯದಲ್ಲೇ ನಾಪತ್ತೆ..
ಇದು ನಮ್ಮ ಗಣರಾಜ್ಯೋತ್ಸವದ ಸಂಭ್ರಮ .. ಅದು ಯಾಕೋ ಗೊತ್ತಿಲ್ಲ.. ಗಣರಾಜ್ಯೋತ್ಸವದಂದು ಚಕ್ಕ ಮಕ್ಕಳನ್ನು ನೋಡಿದಾಗಲೆಲ್ಲ ನಾವು ಆಚರಿಸಿದ ಗಣರಾಜ್ಯೋತ್ಸವದ ನೆನಪಾಗುತ್ತಿದೆ..
ಜೈ ಹಿಂದ್
ನೆನಪುಗಳು... :)
ReplyDeleteಒಳ್ಳೇ ನೆನಪು.. ನಿಂಬೆ ಹುಳಿ ನಂಗಕ್ಕೂ ಕೊಡ್ತಿದ್ದ :)
ReplyDelete