ನಮ್ಮ ದೇಶದಲ್ಲಿ ಶಾಸಕಾಂಗ, ನ್ಯಾಯಾಂಗ, ಮತ್ತು ಕಾರ್ಯಾಂಗ ಅಂತ ೩ ಅಂಗಗಳು... ಶಾಸಕಾಂಗವು ಕಾನೂನನ್ನು ರೂಪಿಸಿದರೆ, ನ್ಯಾಯಾಂಗವು ಅದನ್ನು ಎತ್ತಿಹಿಡಿಯುವ ಕಾರ್ಯವನ್ನೂ ಮತ್ತು ಕಾರ್ಯಾಂಗವು ಅದನ್ನ ಕಾರ್ಯರೂಪಕ್ಕೆ ತರುವಂತೆ ಮಾಡುತ್ತದೆ.. ಇದಕ್ಕೆ ಇತ್ತೀಚಿಗೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಮಾಧ್ಯಮಗಳು.. ದೇಶದಲ್ಲಿನ ಆಗು ಹೋಗುಗಳನ್ನ ಜನತೆಗೆ ತಲುಪಿಸುವ ಮತ್ತು ಮೇಲಿನ ಅಂಗಗಳ ತಪ್ಪುಗಳನ್ನ ವಿಮರ್ಶಿಸಿ ತಿದ್ದುವ ಕೆಲಸವನ್ನ ಮಾಧ್ಯಮಗಳು ಮಾಡುತ್ತಿವೆ....
ಇವೆಲ್ಲ ಒಂದಕ್ಕೊಂದು ಹೊಂದಿಕೊಂಡು ಜನಸಾಮಾನ್ಯರಿಗೆ ಆಗುವ ತೊಂದರೆಗಳನ್ನ ತಪ್ಪಿಸಬೇಕಾದ ಮಹತ್ತರ ಹೊಣೆಗಾರಿಕೆ ಇವುಗಳ ಮೇಲಿದೆ. ಆದ್ರೆ ಇತ್ತೀಚಿಗೆ ನಡೆದ ಬೆಳವಣಿಗೆಗಳು, ಘಟನೆಗಳು ಇವುಗಳು ಇನ್ನೂ ತಮ್ಮ ತಮ್ಮ ಕರ್ತವ್ಯಗಳನ್ನ ಸಮರ್ಥವಾಗಿ ನಡುಸುತ್ತಿದ್ದಾರ ? ಈಲ್ಲಿ ಇನ್ನೂ ಸಂವಿಧಾನ ಉಸಿರಾಡುತ್ತಿದೆಯ? ಅಥವಾ ಸತ್ತು ಬರೆದವರನ್ನು ಹುಡುಕಿಕೊಂಡು ಹೋಗಿದೆಯ? ಈರೀತಿ ಪ್ರಶ್ನೆಗಳು ಕಾಡುವುದು ಸಹಜ.. ಹಾಗಿದ್ದರೆ ಇದು ನಿಜವಾದ ಸಾವ ಅಥವಾ ಕೊಲೆನ?
ಇತ್ತೀಚಿಗೆ ನಡೆದ ಉದಾಹರಣೆಗಳನ್ನ ಗಮನಿಸಿದರೆ ನಮ್ಮ ನಟ ದರ್ಶನ ಬಂಧಿಯಾದ ಸಂದರ್ಭ.. ಮಾಧ್ಯಮದವರು ವಕೀಲರು ಆರಕ್ಷಕರು ಎಲ್ಲ ಕೋರ್ಟ್ ಆವರಣದಲಿ ಸೇರಿದ್ದರು, ಅವರವರ ಕರ್ತವ್ಯಕ್ಕಾಗಿ..ವಾತಾವರಣ ಸ್ವಲ್ಪ ಬಿಸಿಯಾಗೇ ಇತ್ತು.. ದರ್ಶನ ಅಭಿಮಾನಿಗಳೂ ಅವನ ದರ್ಶನಕ್ಕಾಗಿ ಕಾಯುತ್ತಿದ್ದರು. ಹೀಗಿರುವಾಗ ಒಂದು ಮಾಧ್ಯಮದ ವಾಹನವು ಒಬ್ಬ ವಕೀಲನಿಗೆ ಸ್ವಲ್ಪ ತಗುಲಿತ್ತು.. ಇದರಿಂದ ಆತನಿಗೆ ಯಾವುದೇ ರೀತಿಯ ಗಂಭೀರ ಗಾಯಗಳಾಗಲಿ ಅಥವಾ ಶಾಶ್ವತ ಊನತೆಯಾಗಲಿ ಆಗಲಿಲ್ಲ.. ಇದರಿಂದ ಆಕ್ರೋಶಗೊಂಡ ಆತ ತಮ್ಮ ಪರಿವಾರಗಳೊಂದಿಗೆ ಸೇರಿ ಮಾಧ್ಯಮದವರ ಮೇಲೆ ತಿರುಗಿಬಿದ್ದ, ಮನ ಬಂದಂತೆ ಥಳಿಸಿ ಕ್ಯಾಮೆರಾ ಇನ್ನಿತರೇ ಉಪಕರಣಗಳನ್ನ ಕಸಿದುಕೊಂಡ.. ಅಷ್ಟಕ್ಕೆ ಸುಮ್ಮನಾಗದ ಗುಂಪು ಅಲ್ಲಿರುವ ಎಲ್ಲ ಮಾಧ್ಯಮದವರ ಮೇಲೆ ತಿರುಗಿಬಿತ್ತು.. ಈ ನ್ಯಾಯವಾದಿಗಳ ಗಲಾಟೆಯನ್ನ ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದವರು ನ್ಯಾಯವನ್ನ ಕಾರ್ಯರೂಪಕ್ಕೆ ತರಬೇಕಾದ ಆರಕ್ಷಕರು .. ತಮ್ಮ ಕರ್ತವ್ಯ ಮಾಡಲಾರದೆ ಹಿಂತಿರುಗಬೇಕಾದ ಪರಿಸ್ತಿತಿ ಮಾಧ್ಯಮದವರ ಪಾಲಿಗಿತ್ತು.. ಇದರಿಂದ ಹಲವಾರು ರಸ್ತೆಗಳು ಜಾಮ್ ಅಆಗಿದ್ದವು, ಸರ್ಕಾರಿ ವಾಹನಗಳಿಗೆ ಹಾನಿಯಗಿದ್ದವು... ಹಲವಾರು ಪ್ರತಿಸ್ಟಿತರು ಇವರ ಜಗಳ ಸುಧಾರಿಸಲು ಬರಬೇಕಾಯ್ತು.. ಇವರೆಲ್ಲರ ಖರ್ಚು ವೆಚ್ಚ ಜನಸಾಮಾನ್ಯರ ಮೇಲೆ.. ಇದನ್ನೆಲ್ಲಾ ನೋಡಿದಾಗ ನನಗನ್ನಿಸುವುದು ಪ್ರಜಾಪ್ರಭುತ್ವ ಇನ್ನೂ ಇದೆಯಾ? ಕಾನೂನು ಪಾಲಕರೇ ಕಾನೂನನ್ನ ಬರ್ಬರವಾಗಿ ಕೊಲೆ ಮಾಡಿದ್ದಾರ? ಇಲ್ಲಿ ಯಾರದು ತಪ್ಪು ಯಾರದು ಒಪ್ಪು ..? ಈಲ್ಲಿ ಯಾರಿಂದ ಯಾವುದು ಕೊಲೆಯಾಗಿದೆ..?
ಮೇಲಿನ ಘಟನೆಯನ್ನ ಮಾಧ್ಯಮಗಳು ತೀವ್ರವಾಗಿ ಖಂಡಿಸಿದವು.. ಆದ್ರೆ ಇದರಿಂದ ಮಾಧ್ಯಮಗಳ ರೇಟಿಂಗ್ ಸ್ವಲ್ಪ ಜಾಸ್ತಿ ಆಯಿತೆ ಹೊರತು, ವಕೀಲರಿಗೆ ಇದು ಕೋಣನ ಮೇಲೆ ಮಳೆ ಸುರಿದಂತೆ ಆಯಿತು. ಇದಕ್ಕೆ ಮೊನ್ನೆ ಮಂಗಳವಾರ ನಡೆದ ಘಟನೆಯೇ ಸಾಕ್ಷಿ.. ಅಸಲಿಗೆ ನಡೆದದ್ದರೂ ಏನು?
ಶನಿವಾರ ಬೆಳಿಗ್ಗೆ ಮಾಮೂಲಿನಂತೆ ಪೋಲಿಸ್ ಪೇದೆ ಕರ್ತವ್ಯ ನಿರ್ವಸುತ್ತಿದ್ದಾಗ ಒಬ್ಬ ವಕೀಲ ತ್ರಿಬ್ಬಲ್ ರೈಡಿಂಗ್ ಮಾಡಿಕೊಂಡು ಹೆಲ್ಮೆಟ್ ಇಲ್ಲದೆ ಬಂದಿದ್ದಾನೆ. ಪೇದೆ ಅವನನ್ನ ತಡೆದಿದ್ದಾನೆ..ಅದರಿಂದ ಸಿಟ್ಟಾದ ವಕೀಲ ಪೇದೆಯ ಮೇಲೆ ಹರಿ ಹಾಯ್ದಿದ್ದಾನೆ.. ಇಬ್ಬರೂ ಜಗಳವಾಡಿ, ಅವರನ್ನ ನೋಡಲು ಜನ ಸೇರಿದ್ದಾರೆ.. ಪೇದೆಯ ಪ್ರಕಾರ ವಕೀಲ ತನಗೆ ಹೊಡೆದಿದ್ದನಂತಲೂ, ವಕೀಲ ನ ಪ್ರಕಾರ ಪೇದೆ ತನಗೆ ಹೊಡೆದನಂತಲೂ, ತನಗೆ ಹೊಡೆಯಲು ಪೇದೆ ಯಾರು ಅಂತಲೂ ದೂರು ಕೊಟ್ಟಿದ್ದಾರೆ.. ದೂರು ಕೊಟ್ಟಿದ್ದು ಶನಿವಾರ ಸಂಜೆ.. ಸರಿ ಎಲ್ಲ ಸರಿ ಹೋಯ್ತು ಅನ್ನುವಾಗಲೇ ಇದಾದ ೨ ದಿನಗಳ ಬಳಿಕ ಅಂದರೆ ಮಂಗಳವಾರ ವಕೀಲರಿಂದ ಬೆಂಗಳೂರಿನ ಹೃದಯಭಾಗವಾದ ಮೈಸೂರ್ ಬ್ಯಾಂಕ್ ವೃತ್ತದ ಬಳಿ ಹಠಾತ್ ಪ್ರತಿಭಟನೆ.. ಕಾರಣ ಹೋದದ ಪೇದೆಯನನ ಅಮಾನತ್ತು ಮಾಡಬೇಕು.. ಪೋಲಿಸ್ commessioner ಕ್ಷಮಾಪಣೆ ಕೇಳಬೇಕು.. ಸ್ತಳಕ್ಕೆ ಬರಬೇಕು ಹೀಗೆ ಹಲವಾರು ಬೇಡಿಕೆಗಳು..ಇದು ಶುರುವಾಗಿದ್ದು ಸುಮಾರು ಬೆಳಿಗ್ಗೆ ೧೧ ಘಂಟೆಗೆ..
ಪರಿಸ್ತಿತಿ ಸರಿಹೋಗಬಹುದು ಅಂತ ಯಾರೂ ಅಸ್ಟೊಂದು ತಲೆ ಕೆಡಿಸಿಕೊಂಡಿಲ್ಲ .. ಆದ್ರೆ ಇವರ ಪ್ರತಿಭಟನೆಯ ಬಿಸಿ ಯಾವಾಗ ಜನಸಾಮಾನ್ಯರ ಮೇಲೆ ತಾಗಿತೋ ಆವಾಗ ಮಿರ್ಚ್ಜಿ ಸ್ತಳಕ್ಕೆ ಬಂದರು ಏನೋ ಮಾತನಾಡಿದರು ಹೋದರು.. ಸಂಧಾನ ವಿಫಲ ಅಂದ್ರು.. ಆಗಲೇ ವಾಹನ ದಟ್ಟಣೆ ೬-೭ ಕಿ ಮೀ ವ್ಯಾಪಿಸಿತ್ತು.. ಇದರಿಂದ ಜಗತ್ತಿನಲ್ಲೇ ಒಂದು ಹೆಸರು ಮಾಡಿದ ಮಹಾನಗರಿ ಬೆಂಗಳೂರು ಸ್ತಬ್ಧವಾಗಿತ್ತು.. ಮಾಧ್ಯಮದವರು ದೌಡಾಯಿಸಿ ನೇರ ಪ್ರಸಾರ ಮಾಡಿದರು .. ಇದರಿಂದ ಮತ್ತೂ ವ್ಯಗ್ರರಾದ ಕಾನೂನನ್ನ ಅರೆದು ಕುಡಿದವರು, ಮಾಧ್ಯಮದವರ ಮೇಲೂ ತಿರುಗಿ ಬಿದ್ದರು.. ಮಾಧ್ಯಮದವರು, ಆ traffic ನಲ್ಲಿ ಸಿಕ್ಕಿ ಹಾಕಿಕೊಂಡ ಜನರು ವಕೀಲರಿಗೆ ಹಿಡಿ ಶಾಪ ಹಾಕತೊಡಗಿದರು.. ಅಲಿಗೆ ಸುಮಾರು ಮುಷ್ಕರ ಶುರುವಾಗಿ ೩-೪ ಘಂಟೆ ಆಗಿತ್ತು.. ಜನರ ತಾಳ್ಮೆ ಕಳೆದು ಕೊಳ್ಳಲರಂಭಿಸಿದರು.. ವಾಹನಗಳನ್ನ ಅಲ್ಲಿಯೇ ನಿಲ್ಲಿಸಿ ವಕೀಲರ ಜೊತೆ ವಾಗ್ವಾದಕ್ಕಿಳಿದರು.. ಅದಕ್ಕೋ ವಕೀಲರು ಜಗ್ಗಲಿಲ್ಲ .. ambulanceಗಳ ತಳಮಳ ಅರಣ್ಯ ರೋದನವಾಯಿತು. ಅಲ್ಲಿರುವ ರೋಗಿಯ ಸಂಬಂಧಿಕರರು ಬಂದು ಅಂಗಲಾಚಿದರೂ ಇವರ ಮನ ಕರಗಲಿಲ್ಲ.. ಇದರಿಂದ ಬೇಸತ್ತ ಆರಕ್ಷಕರು ವಾಟರ್ ಜೆಟ್ ಕಳುಹಿಸಿದರು.. ಅದರ ಮೇಲೆ ನುಗ್ಗಿದ ವಕೀಲರು ಅದರ ತ್ಯ್ರೆ ಗಾಳಿ ತೆಗೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು ..
ಕೊನೆಗೂ ಇವರ ಪ್ರತಿಭಟನೆಗೆ ಮಣಿದ ಪೋಲಿಸ್ ಆಯುಕ್ತರಿ ಆ ಪೇದೆಯನ್ನ ಅಮಾನತ್ತು ಗೊಳಿಸಿರುವುದಾಗಿ ಘೋಸಿಸಿದಾಗ ವಕೀಲರು ಗೆಲುವಿನ ಕೇಕೆ ಯೊಂದಿಗೆ ಪ್ರತಿಭಟನೆ ಹಿಂಪಡೆದರು.. ಸುಮಾರು ೭-೮ ಗಂಟೆಗೆ ಒತ್ತಡ ಕಡಿಮೆ ಆಯ್ತು..
ಈ ಘಟನೆಯನ್ನು ನೋಡಿದಾಗ ನಮ್ಮಲ್ಲಿ ಪ್ರಜಾಪ್ರಭುತ್ವದ ಕೊಲೆ ಆಗಿದೆಯ..? ಕಾನೂನು ಪಾಲಕರು, ಕಾನೂನನ್ನೇ ಕೊಲೆ ಮಾಡಿದರೆ? ಆರಕ್ಷಕರಿಗೆ ಜನಸಾಮಾನ್ಯರ ತೊದರೆ ಅರ್ಥ ಆಗಿಲ್ಲವೇ..? ಇವರಾರಿಗೂ ವೃದ್ಧರು, ಅನಾರೋಗ್ಯ ಪೀಡಿತರು, ಮಕ್ಕಳು, ತಂದೆ ತಾಯಂದಿರ ಶಾಪ ತಟ್ಟಿಲ್ಲವೇ..? ಇವರಿಗೆ ಪ್ರತಿಭಟನೆ ಮಾಡುವುದಾದರೆ ಅದಕ್ಕಾಗೆ ಮೀಸಲಿಟ್ಟ ಜಾಗ ನೆನಪಾಗಿಲ್ಲವೇ..? ಹೀಗೆ ಹಲವಾರು ಪ್ರಶ್ನೆಗಳು ಕಾಡುವುದು ಸಹಜ.. ಎಲ್ಲರೂ ಅವರವರ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋದರೆ ಇಂತಹ ಅಸಂಬದ್ದ ಕೆಲಸಗಳು ನಡೆಯುವುದಿಲ್ಲ.. ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಉದ್ಯಾನನಗರಿಯ ಮಾನ ಮರ್ಯಾದೆ ಹರಾಜಾಗದಿರಲಿ.. ಇನ್ನಾದರೂ ಇದು ಪುನರಾವರ್ತಿಸದಿರಲಿ ಅಂತ ಹಾರೈಸುತ್ತೇನೆ..

ಅಂಬ್ಯುಲೆನ್ಸ್ ಬಂದಾಗಲೂ ಬಿಟ್ಟಿದ್ವಿಲ್ಲೆ ಅಂತ ಕೇಳಿ ಬಹಳ ಬೇಜಾರಾತು.. ನಾಚಿಕೆಗೇಡಿನ ವಿಷಯ
ReplyDeleteತುಂಬಾ ಚೊಲೊ ಇದ್ದು.. :) ನಿಮ್ಮ "ತಲೆ ಬರಹ : ಕೊಲೆಯ ಸುತ್ತ" ಎನ್ನುವುದನ್ನು ನೋಡಿ ಕೊನೆಯವರೆಗೂ ಯಾರ/ಯಾವುದರ ಕೊಲೆ ಎಂದು ತೆಳದ್ದಿಲ್ಲೆ.. ಕೊನೆಗೆ ಗೊತ್ತಾತು.. ಅರ್ಥಪೂರ್ಣವಾಗಿದ್ದು :) :) ನೂರಕ್ಕೆ ನೂರು ಸತ್ಯ..
ReplyDelete