Wednesday, January 18, 2012

ನನ್ನ ಮಾವ ನಮ್ಮ ಮನೆಗೆ ಬಂದಾಗ..

ನಾವೆಲ್ಲ ಕನ್ನಡ ಶಾಲೆಗೇ ಹೋಗುತ್ತಿದ್ದ ಕಾಲವದು.. ೩-೪ನೆತ್ತಿ..
ನಮ್ಮ ಮನೆ, ಅದರ ಸ್ವಲ್ಪ ಕೆಳಗೆ ಹೋದರೆ ಅಡಿಕೆ ತೋಟ, ಇನ್ನೂ  ಸ್ವಲ್ಪ ಕೆಳಗೆ ಹೋದರೆ ಕೆಸರ ಗದ್ದೆ.. ಆಗ ನಮ್ಮ ಮನೆಯ ಒಕ್ಕಲವ ದುರ್ಗಪ್ಪ ಕೆಸರು ಗದ್ದೆಲಿ ಏನು ಮಾಡ್ತಾನೆ ನೋಡಬೇಕು ಅಂತ ನಾನು ಕೆಳಗೆ ಹಿತ್ತಲ ಕಂಟದ ಮೇಲೆ ಕುಳಿತು  ನೋಡ್ತಿದ್ದೆ .. ೮-೧೦ ಜನ ಕೆಲಸದಾಳುಗಳು.. ಭತ್ತದ ಗದ್ದೆಯಲ್ಲಿ ಕೆಲಸ ಮಾಡ್ತಿದ್ದರು.. ನಾನು  ಶಾಲೆಗೆ ಹೋಗಿಬಂದು ಕಂಟದ ಮೇಲೆ ಕುಳಿತು ಸ್ವಲ್ಪ ಹೊತ್ತು ನೋಡಿ ಊಟ ಮಾಡಿ ಮತ್ತೆ ಶಾಲೆಗೆ ಹೋಗಬೇಕಿತ್ತು..   ನನಗೆ ಸಿಗುವ ಸಮಯ ಸುಮಾರು ೩೦ ನಿಮಿಷ ಮಾತ್ರ.. ಶಾಲೆ ಇರುವುದು ಸುಮಾರು ೧ km ದೂರ.. ಅಂದ್ರೆ ಹೋಗಿ ಬರಲು ಸುಮಾರು ೨೦-೨೫ ನಿಮಿಷ ಬೇಕಾಗ್ತಿತ್ತು.. ಅದರಮಧ್ಯೆ ನಮ್ಮ ಊಟ, ಗದ್ದೆ ವೀಕ್ಷಣೆ ಎಲ್ಲ ನಡೆಯಬೇಕಾಗಿತ್ತು...ಇನ್ನೂ ಜಾಸ್ತಿ ಹೊತ್ತು ಅಲ್ಲೇ ಇದ್ರೆ ನನ್ನ ಅಪ್ಪ ಏನಾದರೂ ಕೆಲಸ ಹೇಳ್ತಿದ್ದ..


ನನಗೆ ನನ್ನ ಅಜ್ಜಿ ಮನೆ ಮೇಲೆ ತುಂಬಾ ಪ್ರೀತಿ.. ಅದರಲೋ ನನ್ನ ಮಾವನ್ದಿರಂದ್ರೆ ನನಗೆ ಅಚ್ಚುಮೆಚ್ಚು.. ನನ್ನ ಎರಡನೆ ಮಾವ  ನಾ ಶಾಲೆಗೆ ಹೋದಾಗ ನಮ್ಮ ಮನೆಗೆ ಬಂದಿದ್ದ.. ನಂಗೆ ಮಧ್ಯಾನ್ಹ ಊಟಕ್ಕೆ ಬಂದಾಗ ಗೊತ್ತಾಗಿದ್ದು ಅವ ಬಂದಿಂದ್ದು.. ಅವ ಗೆದ್ದೆಲಿ ಎಂತ ಕೆಲಸ ನಡೀತಿದೆ ಅಂತ ನೋಡಲು ಅದೇ ಹಿತ್ತಲ ಕಂಟದ ಮೇಲೆ ಕೂತು ನೋಡುತ್ತಿದ್ದ.. ಆಗ ನಾನು ಸುಮ್ಮನೆ ತಮಾಷೆಗೆ ಸುಮ್ಮನೆ ಅವನ ಹಿಂದೆ ಹೋಗಿ ಅವನನ್ನ ದೂಡಿದೆ.. ಅವನಿಗೂ ನಾ ಬಂದಿರುವುದು ಗೊತ್ತಿರಲಿಲ್ಲ .. ಹಿಂಗಾಗಿ ಅವ ಕಂಟದಿಂದ ಕೆಳಗೆ ಬಿದ್ದಿದ್ದ. ಅದು ಸುಮಾರು ೮-೧೦ ಅಡಿ ಆಳ ಇತ್ತು.. ನನಗೆ ಬಹಳ ಭಯ ಆಯ್ತು.. ಅಲ್ಲಿಂದ ಕಾಲ್ಕಿತ್ತೆ.. ಅವನಿಗೆ ಏನಾಯಿತು ಅಂತಲೂ ನೋಡಲಿಲ್ಲ.. ಸುಮ್ಮನೆ ಊಟಕ್ಕೆ ಬಂದು ಕುಳಿತೆ.. ಆಗ ನನ್ನ ಮಾವ ಮೆಲ್ಲನೆ ಸುಧಾರಿಸಿಕೊಂಡು ಬಂದ. ಅವನ ಅಕ್ಕನ ಹತ್ತಿರ ನಡೆದದ್ದೆಲ್ಲ ಹೇಳಿದ.. ನನಗೆ ಮಾತ್ರ ಊಟ ಮುಗಿದಿತ್ತು.. ನಮ್ಮ ಆಯಿಗೆ (ನಾ ಕರೆಯುವುದು ಅತ್ತಿಗೆ ಅಂತ, ನನ್ನ ಅಪ್ಪಚ್ಚಿ ಎಲ್ಲ ಕರಿದ್ರಿಂದ ಅದೂ ನಂಗೆ ಅಭ್ಯಾಸ )  ಸಿಕ್ಕ ಪಟ್ಟೆ ಸಿಟ್ಟು ಬಂತು.. ಒಂದು ಕೋಲು ಹಿಡಿದು ಓಡಿಸ್ಕೊಂಡು ಬಂದಳು  .. ನಾನು ರಸ್ತೆ ಹತ್ತಿ ಓಡಿದೆ..  ಅವಳಿಗೆ ಸಿಟ್ಟು ತಾಳಲಾರದೆ ಅಲ್ಲಿಂದಲೇ ಕಲ್ಲು ಬೀಸಿ ಹೊಡೆದಿದ್ದಳು.. ಅಂತೂ ತಪ್ಪಿಸಿಕೊಂಡು ಶಾಲೆಗೇ ಹೋದೆ.. ಬರುವ ಹೊತ್ತಿಗೆ ಪರಿಸ್ತಿತಿ ತಿಳಿಯಾಗಿತ್ತು..

No comments:

Post a Comment