Sunday, January 29, 2012

ನನ್ನ ಮಗನ ಶಾಲೆಯ ಸ್ಕೂಲ್ ಡೇ ವೀಡಿಯೊ

ನನ್ನ ಮಗ ಶಶಾಂಕ ನ ಶಾಲೆಯ ಸ್ಕೂಲ್ ಡೇ ಕಾರ್ಯಕ್ರಮದಲ್ಲಿ ಅವನ ನೃತ್ಯವಿತ್ತು.. ಅದರ ಸಣ್ಣ tunuku   ಇಲ್ಲಿದೆ..

Wednesday, January 25, 2012

ಗಣರಾಜ್ಯೋತ್ಸವ...

ಜನವರಿ ೨೬ ಬಂದ್ರೆ ಸಾಕು ನಮಗೆ ಎಲ್ಲಿಲ್ಲದ ಸಡಗರ. ನಮಗೆ ಚೌತಿ ಹಬ್ಬವೂ ಒಂದೇ ಜನವರಿ ೨೬ ಒಂದೇ.. ಹೌದು.. ನಾವು ಓದುತ್ತಿದ್ದುದು ಒಂದು ಹಳ್ಳಿಯ ಕನ್ನಡ ಪ್ರಾಥಮಿಕ ಶಾಲೆ. ನಮ್ಮ ಮನೆಯಿಂದ ಸುಮಾರು ೧ ಕಿ ಮಿ ದೂರ.. ಮಾರುಕೇರಿ ಎಂಬ ಗ್ರಾಮ.. ಅಲ್ಲಿ ೭ ನೆ ತರಗತಿ ವರೆಗೆ ವ್ಯಾಸಾಂಗ ಮಾಡಬಹುದಿತ್ತು.. ಅದರ ನಂತರ ಹೈ ಸ್ಚೂಲ್ಗೆ ಹೋಗಬೇಕಿತ್ತು..

ಜನವರಿ ೨೫ ರ ಮಧ್ಯಾನ್ಹವೇ ಶಾಲೆಗೇ ಹೆಚ್ಚು ಕಡಿಮೆ ರಜೆ ಲೆಕ್ಕ.. ಪಾಠ ಇರುತ್ತಿರಲಿಲ್ಲ.. ಶಾಲೆಯನ್ನ ತಳಿರು ತೋರಣಗಳಿಂದ ಸಿಂಗರಿಸಬೇಕು ಎನ್ನುವ ಉತ್ಸಾಹ..  ಮಧ್ಯಾನ್ಹ ಮನೆಗೆ ಬಂದು ಊಟ ಮುಗಿಸಿ ಓದುತ್ತಿದ್ದೆವು.. ೬-೭ ಜನರ ಗುಂಪು ಮಾಡಿಕೊಂಡು ಯಾರ್ಯಾರದ್ದೋ ಮನೆ ತೋಟ, ಹಳ್ಳ, ಬೇಲಿ ಎಲ್ಲ ಕಡೆ ಸುತ್ತಿ ಒಂದಿಷ್ಟು ಅಲಂಕಾರಿಕ ಗಿಡಗಳು, ತೇರು ಹೂವು, ಬಣ್ಣ ಬಣ್ಣದ ಎಲೆಗಳಿರುವ ಗಿಡಗಳಲ ಕೊಂಬೆಗಳನ್ನ ಮುರಿದು ತರ್ತಾ ಇದ್ದೆವು.. ಅದನ್ನೆಲ್ಲ ಒಂದು ಮಾಲೆ ತರಹ ಮಾಡಿ ಶಾಲೆಯ ಸುತ್ತೆಲ್ಲ ಕಟ್ಟುತ್ತಿದ್ದೆವು..ಅಂತೂ ಸಾಯಂಕಾಲ ೬-೭ ಗಂಟೆವರೆಗೆ ಎಲ್ಲ ತಯಾರು ಮಾಡಿ ಮನೆಗೆ ಹೋಗ್ತಾ ಇದ್ವಿ. ಮನೆಗೆ ಹೋದರೆ ನಾಳೆ ಗಣರಯೋತ್ಸವದ್ದೆ ಚಿಂತೆ.ಇದೆ ಗುಂಗಿನಲ್ಲೇ ಮಲ್ಗಿರುತ್ತಿದ್ವಿ.
 
ಬೆಳಗಾಗೆದ್ದು ಬೇಗ ತಯಾರಾಗಿ ೬.೩೦ ಕ್ಕೆಲ್ಲ ಶಾಲೆಯಲ್ಲಿ ಹಾಜರ್..  ಬರುವಾಗ ಹೂವುಗಳು, ವಿಶೇಷವಾಗಿ ಧ್ವಜದ ಕಟ್ಟೆ
ಅಲಂಕಾರಕ್ಕೆ, ಯೆಜ್ಲು ಅಂತ ಒಂದು ಮರದ ಹೂವು , ಮತ್ತೆ ಬಾವುಟದ ಒಳಗೆ ಹಾಕಲಿಕ್ಕೋ ಹೂವುಗಲನ್ನ ತರ್ತ ಇದ್ವಿ. ಸುಮಾರು ಹುಡುಗರು ತಬ್ದ ಹೂವುಗಳನ್ನ ಸುಂದರವಾಗಿ ಧ್ವಜದ ಕಟ್ಟೆಯನ್ನ ಅಲಂಕರಿಸಿ, ಧ್ವಜದ ಒಳಗೆ ಹೂವು ಹಾಕಿ ಅದನ್ನ ಕಟ್ಟುವ ರೀತಿ ಕಟ್ಟಿ ಮೇಲಕ್ಕೆ ಕಟ್ಟುತ್ತಿದ್ದೆವು.. ಇದೆಲ್ಲ ನಮ್ಮ ಮಾಸ್ತರರ, ಅಕ್ಕೋರ ಸಮ್ಮುಖದಲ್ಲೇ ನಡೀತಿತ್ತು.. ನಮಗೆ ಶಾಸ್ತ್ರಿ ಮಾಸ್ತರರು(ಈಗ ಇಲ್ಲ, ಸ್ವರ್ಗಸ್ತರಾಗಿದ್ದಾರೆ) , ಗಿರಿಜಾ ಅಕ್ಕೋರು, ಜಯಲಕ್ಷ್ಮಿ ಅಕ್ಕೋರು.. ಇವರ ಉಪಸ್ತಿತಿಯಲ್ಲಿ ನಡೀತಿತ್ತು.. ಕಾರ್ಯಕ್ರಮಕ್ಕೆ ಒಬ್ಬರು ಅಧ್ಯಕ್ಷರು ಬೇಕಲ್ಲ .. ಅದಕ್ಕಾಗಿ ನಮ್ಮ ನೆರೆಮನೆಯವರಾದ ಟಿ ಎಸ ಭಟ್ಟರೇ  ನಮ್ಮ ಶಾಲೆಯ ಖಾಯಂ ಅಧ್ಯಕ್ಷರು.. ಅಂತೂ ೭:೩೦ ಅ ಸುಮಾರಿಗೆ ಅಧ್ಯಕ್ಷರಿಂದ ಧ್ವಜಾರೋಹಣ, ಆಮೇಲೆ ಜನಗಣ ಮನ, ನಮ್ಮ ಶಾಸ್ತ್ರೀ ಮಾಸ್ತರರಿಂದ ಪ್ರಾಸ್ತಾವಿಕ ಮಾತು, ಆಮೇಲೆ ಅಧ್ಯಕ್ಷರಿಂದ ನಾಲ್ಕಾರು ಹಿತವಚನಗಳು, .. ಅದು ಮುಗಿದ ಮೇಲೆ ಮಕ್ಕಳು ಯಾರದ್ರೂ ಭಾಷಣ ಮಾಡುವವರಿದ್ದರೆ ಅವರ ಭಾಷಣ.. ನಾನೂ ಸಾಧಾರಣವಾಗಿ ಭಾಷಣ ಮಾಡುತ್ತಿದ್ದೆ.. ಆದ್ರೆ ಆ ಸಲ  ನನಗೆ ನನ್ನ ಅಪ್ಪಚ್ಚಿ ಎಲ್ಲ ಸೇರಿ " ಹೇ ಏನಂತ ಕನ್ನಡದಲ್ಲಿ ಭಾಷಣ ಮಾಡ್ತ್ಯ? ಇಂಗ್ಲಿಷ್ ನಲ್ಲಿ ಭಾಷಣ ಮಾಡವ" ಹೇಳಿ ಒಂದು ಪೇಜು ಇಂಗ್ಲಿಷ್ ಭಾಷಣ ಬರೆದು ಕೊಟ್ರು.. ನಾನೂ ಸುಮಾರು ಒಂದು ವಾರದಿಂದ ಬಾಯಿಪಾಠ ಮಾಡಿ ತಯಾರಾದೆ.. ಸರಿ ಇನ್ನೇನು ಭಾಷಣದಲ್ಲಿ ನನ್ನ ಹೆಸರೂ ಇತ್ತು.. ಶಾಸ್ತ್ರಿ ಮಾಸ್ತರರು ನನ್  ಕರೆದರು,.. ನನಗೆ ಭಯ.. ಅದರೂ ಹೆಂಗೋ ಹೋಗಿ  ನಿಂತು ಶುರು ಮಾಡ್ಕಂಡೆ.. ಎಲ್ಲರಿಗೂ ನಾ ಏನು ಹೇಳ್ತಾ ಇದ್ದೇನೆ ಅಂತಾನೆ ಅರ್ಥ ಆಗಿಲ್ಲ (ನಂಗೂ ಸಹ). ನಮ್ಮ ಅಧ್ಯಕ್ಷರು ಏನೋ ಹೇಳ್ತಿದ್ದರು.. ಅದು ನನ್ನ ಕಂಠ ಪಾಠ ಕ್ಕೆ ತೊಂದ್ರೆ ಆಯ್ತು.. ಏನು ಅಂತ ಕೇಳಿದೆ.. ಏನಿಲ್ಲ ನೀ ಮುಂದುವರೆಸ ಅಂದ್ರು.. ಸರಿ ಶುರು ಮಾಡಿದ ಮೇಲೆ ಮುಗಿಸಬೇಕಲ್ಲ.. ಪುನಃ ಮೊದಲಿನಿಂದ ಶುರು ಮಾಡಿ, ಮುಗಿಸಿದೆ.. ಯಾರಿಗೆ ಏನು ಅರ್ಥ ಆಯ್ತೋ ಗೊತ್ತಿಲ್ಲ.. ಅಂತೂ ಒಂದಿಸ್ತು ಚಪ್ಪಾಳೆ ಬಂತು..  ಕೊನೆಗೆ ಒಂದು ಸಣ್ಣ ವಂದನಾರ್ಪಣೆ., ಅದೇ ಸಮಯಕ್ಕೆ ನಮಗೆಲ್ಲ ಚಾಕಲೇಟ್ ಹಂಚಿದರು.. 
ಮುಂದಿನದೇ ಪ್ರಭಾತ್ ಪೇರಿ.. ಎಲ್ಲ ಸಾಲಾಗಿ ರಸ್ತೆಯ ಇಕ್ಕೆಡೆಗಳಲ್ಲಿ, ಒಂದು ಸಾಲಿನಲ್ಲಿ ಹುಡುಗರೂ ಇನ್ನೊಂದು ಸಾಲಿನಲ್ಲಿ ಹುಡುಗಿಯರೂ ನಿಂತು ಅದಕ್ಕೆ ಮುಂದಾಳಾಗಿ ನಮ್ಮ ಶಾಸ್ತ್ರಿ ಮಾಸ್ತರರು ಇರ್ತಿದ್ರು.. ನಮ್ಮ ಯಾತ್ರೆ ಅಲ್ಲಿಂದ ಸುಮಾರು ೧ ಕಿ ಮಿ  ದೂರದ ಗುಡ್ಡೆ ಕಟ್ಟೆ ವರೆಗೆ ನಡೀತಿತ್ತು.. ಸರಿ,, " ಬ್ಹೊಲೋ ಭಾರತ್ ಮಾತಾಕಿ,""ಸುಭಾಶ್ ಚಂದ್ರ ಭೋಸ್ ಕಿ" ಮಾಹಾತ್ಮ ಗಾಂಧೀಜಿ ಕಿ "  ಜೈಕಾರ ದೊಂದಿಗೆ ನಮ್ಮ ಪೇರಿ ಹೊರಟಿತು.. ಮೊದಲು ಬರುತ್ತಿದ್ದುದು  ವಾಸು ಅಂಗಡಿ.. ಅವರು ಎಲ್ಲ ಮಕ್ಕಳಿಗೂ ಒಂದೊಂದು  ಪೆಪ್ಪರ್ ಮೆಂಟ್ ಕೊಡ್ತಿದ್ದರು.. ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ.. ಆಮೇಲೆ ನನ್ನ ಚಿಕ್ಕಪ್ಪನ ಅಂಗಡಿ ಅವನೂ ಸಹ ಎಲ್ಲರಿಗೂ  ಲಿಂಬೆ chocolete ಕೊಡುವ  ಸಂಪ್ರದಾಯ ಇಟ್ಟುಕೊಂಡಿದ್ದ.. ಅದನ್ನ ಸ್ವಾಹ ಮಾಡಿ ಗುಡ್ಡೆ ಕಟ್ಟೆ ವರೆಗೆ ಭೇಟಿ ನೀಡು ಅಲ್ಲಿಂದ ವಾಪಸ್ ಬರ್ತಿದ್ವಿ.. ಕೊನೆಗೆ ಶಾಲೆಗೇ ಬಂದು ಅಲ್ಲಿಗೆ ಕಾರ್ಯಕ್ರಮ ಮುಕ್ತಾಯವಾಗ್ತಿತ್ತು .. ಬಳಲಿಬೆನ್ದಗ್ತಾ ಇದ್ವಿ.. ಹಲವರು ಮಧ್ಯದಲ್ಲೇ ನಾಪತ್ತೆ..
ಇದು ನಮ್ಮ ಗಣರಾಜ್ಯೋತ್ಸವದ ಸಂಭ್ರಮ .. ಅದು  ಯಾಕೋ ಗೊತ್ತಿಲ್ಲ.. ಗಣರಾಜ್ಯೋತ್ಸವದಂದು ಚಕ್ಕ ಮಕ್ಕಳನ್ನು ನೋಡಿದಾಗಲೆಲ್ಲ ನಾವು ಆಚರಿಸಿದ ಗಣರಾಜ್ಯೋತ್ಸವದ ನೆನಪಾಗುತ್ತಿದೆ.. 

 
ಜೈ ಹಿಂದ್

Friday, January 20, 2012

ಕನಸುಗಳು

ನನ್ನ ಸಹೋದ್ಯೋಗಿ ಇಂದು ಯಾಕೋ ನನ್ನ ವಿರುದ್ಧ ವಿನಾ ಕಾರಣ ರೇಗಾಡಿದ್ದ. ನಾನೂ ತುಂಬಾ ಹುಡುಕಾಡಿದೆ ನನ್ನ ತಪ್ಪಿಗಾಗಿ.. ಏನೋ ಸಣ್ಣ ಪುಟ್ಟ ತಪ್ಪುಗಳು ಕಾಣಿಸಿದವು .. ಆದ್ರೆ ಅದರಲ್ಲಿ ನನ್ನ ಪಾತ್ರ ಏನೂ ಇರಲಿಲ್ಲ.. ಅಂದು ನನ್ನ ಮನಸ್ಸಿಗೆ ತುಂಬಾ ನೋವು, ಬೇಸರ ಆಗಿತ್ತು.. ಅದೇ ಆಲೋಚನೆಯಲ್ಲೇ ಗಾಡಿ ಓಡಿಸಿಕೊಂಡು ಮನೆಗೆ ಬಂದೆ. ಹೆಂಡತಿ ಮಕ್ಕಳ ಜೊತೆ ಮಾತನಾಡುವ ಮನಸ್ಸಿರಲಿಲ್ಲ.. ಸುಮ್ಮ ಸುಮ್ಮನೆ ರೇಗುತ್ತಿದ್ದೆ.. ಪಾಪ ನನ್ನ ಮಗನೂ ಸಹ ಸಾಮಾನ್ಯ ಕಾರಣಕ್ಕೆ ಪೆಟ್ಟು ತಿಂದು ಅತ್ತ. ನನಗೆ ತುಂಬಾ ಸಂಕಟವಾಯಿತು.. ರಾತ್ರೆ ಎಲ್ಲ ಇದೇ ವಿಚಾರವಾಗಿ  ಬೇಸರಗೊಂಡು  ಮಲಗಿದ್ದೆ.. ತುಂಬಾ ಹೊತ್ತಾದರೂ ನಿದ್ದೆ ಬಂದಿಲ್ಲ.. ಕಣ್ಣು ಮುಚ್ಚಿದರೆ ಅದೇ ಯೋಚನೆ.. ಹೀಗೆ ಮಾಡಬಹುದಿತ್ತು.. ಹಾಂಗೆ  ಮಾಡಬಹುದಿತ್ತು.. ಎಂಬೆಲ್ಲ ಯೋಚನೆಗಳು.. ನಾಳೆ ಕಚೇರಿಗೆ ಹೋಗಬೇಕೆಂಬ ಜಾಗ್ರತ ಪ್ರಜ್ಞೆ ಇದ್ದರೂ ನಿದ್ದೆ ಮಾತ್ರ ಹತ್ತಿರ ಸುಳಿಯುತ್ತಿರಲಿಲ್ಲ . ಯಾಕೆ ಹೀಗೆ..? ಮನುಷ್ಯರು ಯಾಕೆ ಈರೀತಿ ವರ್ತಿಸುತ್ತಾರೆ..? ಎಂಬಿತ್ಯಾದಿ..
ಅದು ಯಾವಾಗ ನಿದ್ರೆ ಬಂತೋ ತಿಳಿಯಲಿಲ್ಲ.. ಬೆಳಿಗ್ಗೆ ಮಾಮೂಲಿ ಸಮಯದಲ್ಲೇ ಎಚ್ಚರ ಆಯ್ತು.. ಏನೋ ಕನಸು ಬಿದ್ದ ನೆನಪು.. ಯಾವ ಕನಸು ಎಂದು ಯೋಚನೆ ಮಾಡಿದರೂ ನೆನಪಿಗೆ ಬರಲಿಲ್ಲ.. ಸರಿ, ದಿನನಿತ್ಯದ ಕೆಲಸ ಮುಗಿಸಿ ಕಚೇರಿಯ ಕಡೆ ಮುಖ ಮಾಡಿದಾಗ ನಿನ್ನೆಯ ಘಟನೆ ನೆನಪಾಯ್ತು.. ಅದರ ಜೊತೆಗೆ ನಿನ್ನೆ ಬಿದ್ದ ಕನಸೂ ಅಲ್ಪ ಸ್ವಲ್ಪ ನೆನಪಾಯ್ತು.. ಅದು ನಿನ್ನ ನಡೆದ ಘಟನೆಗೆ ತೀರ ಹತ್ತಿರವಾಗಿತ್ತು.. ಆದರೆ ಸ್ತಳ ಪ್ರದೇಶ ಎರಡೂ ಬೇರೆ, ಅಷ್ಟೇ ಅಲ್ಲದೆ ಇನ್ನೂ  ಯಾರ್ಯಾರೋ ಇದ್ರೂ.. ಇದೆಲ್ಲ ಯೋಚಿಸಿದಾಗ ನನಗೆ ನಮ್ಮ ಮನಸ್ಸಿನ ಕಾರ್ಯವೈಖರಿ ಬಗ್ಗೆ ಕುತೂಹಲ ಜಾಸ್ತಿಯಾಯ್ತು.. ಈ ಕನಸುಗಳು ಯಾಕೆ ಬೀಳುತ್ತವೆ? ಅದಕ್ಕೂ ದೈನಂದಿನ ಜೀವನಕ್ಕೋ ಎಷ್ಟರ ಮಟ್ಟಿಗೆ ಸಂಬಂಧ.. ಜಾಗ್ರತ ಮನಸ್ಸು.. ಸುಪ್ತ ಮನಸ್ಸು.. ಇವುಗಳ ಬಗ್ಗೆ ಯೋಚಿಸತೊಡಗಿದೆ..
ಮುಖ್ಯವಾಗಿ ಕನಸು ಯಾತಕ್ಕೆ ಬೀಳುತ್ತವೆ..? ನಾವು ನಿದ್ರಾ ಸ್ತಿತಿಯಲ್ಲಿರುವಾಗ ನಮ್ಮ ಒಳಮನಸ್ಸಿನ ಆಲೋಚನೆಗಳೇ ಕನಸುಗಳು.. ಇದು ಕಥೆ, ಅಥವಾ ಹಳೆಯ ನೆನಪುಗಲೋ  ಅಥವಾ ಮುಂದೆ ಆಗುವ ಘಟನೆಗಳೂ ಇರುತ್ತವೆ.. ಇದು ಕೆಲವು ಸಲ ಮುದ ನೀಡಿದರೆ ಬಹುತೀಕ ಸಲ ಕಹಿ ಯಾಗಿರುತ್ತವೆ.. ಇನ್ನು ಅನಾರೋಗ್ಯ ಕಾಲದಲ್ಲಿ ಮನಸ್ಸು ದುರ್ಬಲ ವಾಗಿರುವ ಕಾರಣ, ಬೀಳುವ ಕನಸುಗಳು ಬಹುತೇಕ ಕೆಟ್ಟದ್ದಿರುತ್ತದೆ..
ಇನ್ನು ನಾವು ಗಾಡಿ ಓಡಿಸುವಾಗ ನಮ್ಮಲ್ಲಿ ಎಷ್ಟು ಜನ ನಮ್ಮ ಸಂಪೂರ್ಣ ಗಮನವನ್ನ ರಸ್ತೆಯ ಮೇಲೆ ಇತ್ತು ಗಾಡಿ ಓಡಿಸುತ್ತೇವೆ..? ಬಹುಶಃ ಹೊಸಬರು ಮಾತ್ರ.. ಹೆಚ್ಚಿನವರು ಬೇರೆ ಏನೋ ಯೋಚನೆ ಮಾಡುತ್ತಿರುತ್ತಾರೆ.. ಇದು ಸಾಮಾನ್ಯ.. ಆದ್ರೆ ಸಿಗ್ನಲ್ ಬಂದಾಕ್ಷಣ ನಮ್ಮ ಗಾಡಿ ನಿಲ್ಲುತ್ತದೆ,, ಬಿಟ್ಟ ತಕ್ಷಣ ಓಡುತ್ತದೆ.. ಅಡ್ಡಬಂದರೆ ಬ್ರೇಕ್ ಬೀಳುತ್ತದೆ.. ಖಾಲಿ ರಸ್ತೆ ಬಂದರೆ ವೇಗ ಜಾಸ್ತಿ ಆಗುತ್ತದೆ.. ಹೀಗೆ ಎಲ್ಲವೂ ನಾವು ತಿಳಿದು ಮನವರಿಕೆ ಮಾಡಿಕೊಂಡು ಮಾಡುವುದಲ್ಲ.. ಹಾಗಿದ್ದರೆ ಇದು ಹೇಗೆ? ಇದು ಯಾವುದರಿಂದ ನಿಯಂತ್ರಿಸಲ್ಪಡುತ್ತದೆ..? ಅಂದ್ರೆ ಇದು ಬಹುಶ ನಮ್ಮ ತಾತ್ಕಾಲಿಕ ಮನಸ್ಸಿನಲ್ಲಿ ನಡೆಯುವ ನಿತ್ಯ ಕ್ರಿಯೆಗಳು..  ಇದೂ ಒಂದು ರೀತಿ  ಹಗಲುಗನಸೇ?


ಮನಸ್ಸಿನ ಕಾರ್ಯ ವೈಖರಿ ಎಷ್ಟು ವಿಚಿತ್ರ?  ಒಬ್ಬಂಟಿಯಾಗಿದ್ದಾಗ ನಮ್ಮಸ್ತಕ್ಕೆ ನಾವೇ ಏನೇನೊ ಆಲೋಚಿಸುತ್ತಿರುತ್ತೇವೆ.. ನಮ್ಮ ಅವಯವಗಳೂ ಅದಕ್ಕೆ ಸರಿಯಾಗಿ ಸ್ಪಂದಿಸುತ್ತಿರುತ್ತವೆ.. ಅದೇ ಬೇರೆ ಯಾರಾದರೂ ಆ ಸಮಯದಲ್ಲಿ ಬಂದರೆ ತಕ್ಷಣ ನಿಂತು ಹೋಗುತ್ತವೆ..

ಎಷ್ಟು ವಿಚಿತ್ರ ಈ ಕನಸುಗಳು..?

ಒಂದು ಕೊಲೆಯ ಸುತ್ತ.....

ನಮ್ಮ ದೇಶದಲ್ಲಿ ಶಾಸಕಾಂಗ, ನ್ಯಾಯಾಂಗ, ಮತ್ತು ಕಾರ್ಯಾಂಗ ಅಂತ ೩ ಅಂಗಗಳು... ಶಾಸಕಾಂಗವು ಕಾನೂನನ್ನು ರೂಪಿಸಿದರೆ, ನ್ಯಾಯಾಂಗವು ಅದನ್ನು ಎತ್ತಿಹಿಡಿಯುವ ಕಾರ್ಯವನ್ನೂ ಮತ್ತು ಕಾರ್ಯಾಂಗವು  ಅದನ್ನ ಕಾರ್ಯರೂಪಕ್ಕೆ ತರುವಂತೆ ಮಾಡುತ್ತದೆ.. ಇದಕ್ಕೆ ಇತ್ತೀಚಿಗೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಮಾಧ್ಯಮಗಳು.. ದೇಶದಲ್ಲಿನ  ಆಗು ಹೋಗುಗಳನ್ನ ಜನತೆಗೆ ತಲುಪಿಸುವ ಮತ್ತು ಮೇಲಿನ ಅಂಗಗಳ ತಪ್ಪುಗಳನ್ನ ವಿಮರ್ಶಿಸಿ ತಿದ್ದುವ ಕೆಲಸವನ್ನ ಮಾಧ್ಯಮಗಳು ಮಾಡುತ್ತಿವೆ.... 

ಇವೆಲ್ಲ ಒಂದಕ್ಕೊಂದು ಹೊಂದಿಕೊಂಡು ಜನಸಾಮಾನ್ಯರಿಗೆ ಆಗುವ ತೊಂದರೆಗಳನ್ನ ತಪ್ಪಿಸಬೇಕಾದ ಮಹತ್ತರ ಹೊಣೆಗಾರಿಕೆ  ಇವುಗಳ ಮೇಲಿದೆ.  ಆದ್ರೆ ಇತ್ತೀಚಿಗೆ ನಡೆದ ಬೆಳವಣಿಗೆಗಳು, ಘಟನೆಗಳು ಇವುಗಳು ಇನ್ನೂ ತಮ್ಮ ತಮ್ಮ ಕರ್ತವ್ಯಗಳನ್ನ ಸಮರ್ಥವಾಗಿ ನಡುಸುತ್ತಿದ್ದಾರ ? ಈಲ್ಲಿ ಇನ್ನೂ ಸಂವಿಧಾನ ಉಸಿರಾಡುತ್ತಿದೆಯ? ಅಥವಾ ಸತ್ತು ಬರೆದವರನ್ನು ಹುಡುಕಿಕೊಂಡು ಹೋಗಿದೆಯ?  ಈರೀತಿ ಪ್ರಶ್ನೆಗಳು ಕಾಡುವುದು ಸಹಜ.. ಹಾಗಿದ್ದರೆ ಇದು ನಿಜವಾದ ಸಾವ ಅಥವಾ ಕೊಲೆನ? 

ಇತ್ತೀಚಿಗೆ ನಡೆದ ಉದಾಹರಣೆಗಳನ್ನ ಗಮನಿಸಿದರೆ ನಮ್ಮ ನಟ ದರ್ಶನ ಬಂಧಿಯಾದ ಸಂದರ್ಭ.. ಮಾಧ್ಯಮದವರು ವಕೀಲರು ಆರಕ್ಷಕರು ಎಲ್ಲ ಕೋರ್ಟ್ ಆವರಣದಲಿ ಸೇರಿದ್ದರು, ಅವರವರ ಕರ್ತವ್ಯಕ್ಕಾಗಿ..ವಾತಾವರಣ ಸ್ವಲ್ಪ ಬಿಸಿಯಾಗೇ ಇತ್ತು.. ದರ್ಶನ ಅಭಿಮಾನಿಗಳೂ ಅವನ ದರ್ಶನಕ್ಕಾಗಿ ಕಾಯುತ್ತಿದ್ದರು. ಹೀಗಿರುವಾಗ ಒಂದು ಮಾಧ್ಯಮದ ವಾಹನವು ಒಬ್ಬ ವಕೀಲನಿಗೆ ಸ್ವಲ್ಪ ತಗುಲಿತ್ತು.. ಇದರಿಂದ ಆತನಿಗೆ ಯಾವುದೇ ರೀತಿಯ ಗಂಭೀರ ಗಾಯಗಳಾಗಲಿ ಅಥವಾ ಶಾಶ್ವತ ಊನತೆಯಾಗಲಿ ಆಗಲಿಲ್ಲ.. ಇದರಿಂದ ಆಕ್ರೋಶಗೊಂಡ ಆತ ತಮ್ಮ ಪರಿವಾರಗಳೊಂದಿಗೆ ಸೇರಿ ಮಾಧ್ಯಮದವರ ಮೇಲೆ ತಿರುಗಿಬಿದ್ದ, ಮನ ಬಂದಂತೆ ಥಳಿಸಿ ಕ್ಯಾಮೆರಾ ಇನ್ನಿತರೇ ಉಪಕರಣಗಳನ್ನ ಕಸಿದುಕೊಂಡ.. ಅಷ್ಟಕ್ಕೆ ಸುಮ್ಮನಾಗದ ಗುಂಪು ಅಲ್ಲಿರುವ ಎಲ್ಲ ಮಾಧ್ಯಮದವರ ಮೇಲೆ ತಿರುಗಿಬಿತ್ತು.. ಈ ನ್ಯಾಯವಾದಿಗಳ ಗಲಾಟೆಯನ್ನ  ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದವರು ನ್ಯಾಯವನ್ನ ಕಾರ್ಯರೂಪಕ್ಕೆ ತರಬೇಕಾದ ಆರಕ್ಷಕರು .. ತಮ್ಮ ಕರ್ತವ್ಯ ಮಾಡಲಾರದೆ ಹಿಂತಿರುಗಬೇಕಾದ ಪರಿಸ್ತಿತಿ ಮಾಧ್ಯಮದವರ ಪಾಲಿಗಿತ್ತು..  ಇದರಿಂದ ಹಲವಾರು ರಸ್ತೆಗಳು ಜಾಮ್ ಅಆಗಿದ್ದವು, ಸರ್ಕಾರಿ ವಾಹನಗಳಿಗೆ ಹಾನಿಯಗಿದ್ದವು... ಹಲವಾರು ಪ್ರತಿಸ್ಟಿತರು  ಇವರ ಜಗಳ ಸುಧಾರಿಸಲು ಬರಬೇಕಾಯ್ತು.. ಇವರೆಲ್ಲರ ಖರ್ಚು ವೆಚ್ಚ ಜನಸಾಮಾನ್ಯರ ಮೇಲೆ..  ಇದನ್ನೆಲ್ಲಾ ನೋಡಿದಾಗ ನನಗನ್ನಿಸುವುದು  ಪ್ರಜಾಪ್ರಭುತ್ವ ಇನ್ನೂ ಇದೆಯಾ? ಕಾನೂನು ಪಾಲಕರೇ ಕಾನೂನನ್ನ ಬರ್ಬರವಾಗಿ ಕೊಲೆ ಮಾಡಿದ್ದಾರ? ಇಲ್ಲಿ ಯಾರದು ತಪ್ಪು ಯಾರದು ಒಪ್ಪು ..? ಈಲ್ಲಿ ಯಾರಿಂದ ಯಾವುದು ಕೊಲೆಯಾಗಿದೆ..?

ಮೇಲಿನ ಘಟನೆಯನ್ನ ಮಾಧ್ಯಮಗಳು ತೀವ್ರವಾಗಿ ಖಂಡಿಸಿದವು.. ಆದ್ರೆ ಇದರಿಂದ ಮಾಧ್ಯಮಗಳ ರೇಟಿಂಗ್ ಸ್ವಲ್ಪ ಜಾಸ್ತಿ ಆಯಿತೆ ಹೊರತು, ವಕೀಲರಿಗೆ ಇದು ಕೋಣನ ಮೇಲೆ ಮಳೆ ಸುರಿದಂತೆ ಆಯಿತು. ಇದಕ್ಕೆ ಮೊನ್ನೆ ಮಂಗಳವಾರ ನಡೆದ ಘಟನೆಯೇ ಸಾಕ್ಷಿ..  ಅಸಲಿಗೆ ನಡೆದದ್ದರೂ ಏನು?


ಶನಿವಾರ ಬೆಳಿಗ್ಗೆ ಮಾಮೂಲಿನಂತೆ ಪೋಲಿಸ್ ಪೇದೆ ಕರ್ತವ್ಯ ನಿರ್ವಸುತ್ತಿದ್ದಾಗ ಒಬ್ಬ ವಕೀಲ ತ್ರಿಬ್ಬಲ್ ರೈಡಿಂಗ್ ಮಾಡಿಕೊಂಡು ಹೆಲ್ಮೆಟ್ ಇಲ್ಲದೆ ಬಂದಿದ್ದಾನೆ. ಪೇದೆ ಅವನನ್ನ ತಡೆದಿದ್ದಾನೆ..ಅದರಿಂದ ಸಿಟ್ಟಾದ ವಕೀಲ ಪೇದೆಯ ಮೇಲೆ ಹರಿ ಹಾಯ್ದಿದ್ದಾನೆ.. ಇಬ್ಬರೂ ಜಗಳವಾಡಿ, ಅವರನ್ನ ನೋಡಲು ಜನ ಸೇರಿದ್ದಾರೆ.. ಪೇದೆಯ ಪ್ರಕಾರ ವಕೀಲ ತನಗೆ ಹೊಡೆದಿದ್ದನಂತಲೂ, ವಕೀಲ ನ ಪ್ರಕಾರ ಪೇದೆ ತನಗೆ ಹೊಡೆದನಂತಲೂ, ತನಗೆ ಹೊಡೆಯಲು ಪೇದೆ ಯಾರು ಅಂತಲೂ ದೂರು ಕೊಟ್ಟಿದ್ದಾರೆ..  ದೂರು ಕೊಟ್ಟಿದ್ದು ಶನಿವಾರ ಸಂಜೆ.. ಸರಿ ಎಲ್ಲ ಸರಿ ಹೋಯ್ತು ಅನ್ನುವಾಗಲೇ ಇದಾದ ೨ ದಿನಗಳ ಬಳಿಕ ಅಂದರೆ ಮಂಗಳವಾರ ವಕೀಲರಿಂದ ಬೆಂಗಳೂರಿನ ಹೃದಯಭಾಗವಾದ ಮೈಸೂರ್ ಬ್ಯಾಂಕ್ ವೃತ್ತದ ಬಳಿ  ಹಠಾತ್ ಪ್ರತಿಭಟನೆ.. ಕಾರಣ ಹೋದದ ಪೇದೆಯನನ ಅಮಾನತ್ತು ಮಾಡಬೇಕು.. ಪೋಲಿಸ್ commessioner  ಕ್ಷಮಾಪಣೆ ಕೇಳಬೇಕು.. ಸ್ತಳಕ್ಕೆ ಬರಬೇಕು ಹೀಗೆ ಹಲವಾರು ಬೇಡಿಕೆಗಳು..ಇದು ಶುರುವಾಗಿದ್ದು ಸುಮಾರು ಬೆಳಿಗ್ಗೆ ೧೧ ಘಂಟೆಗೆ..

ಪರಿಸ್ತಿತಿ ಸರಿಹೋಗಬಹುದು ಅಂತ ಯಾರೂ ಅಸ್ಟೊಂದು ತಲೆ ಕೆಡಿಸಿಕೊಂಡಿಲ್ಲ .. ಆದ್ರೆ ಇವರ ಪ್ರತಿಭಟನೆಯ ಬಿಸಿ ಯಾವಾಗ ಜನಸಾಮಾನ್ಯರ ಮೇಲೆ ತಾಗಿತೋ ಆವಾಗ ಮಿರ್ಚ್ಜಿ ಸ್ತಳಕ್ಕೆ ಬಂದರು ಏನೋ ಮಾತನಾಡಿದರು ಹೋದರು.. ಸಂಧಾನ ವಿಫಲ ಅಂದ್ರು.. ಆಗಲೇ ವಾಹನ ದಟ್ಟಣೆ ೬-೭ ಕಿ ಮೀ ವ್ಯಾಪಿಸಿತ್ತು.. ಇದರಿಂದ ಜಗತ್ತಿನಲ್ಲೇ ಒಂದು ಹೆಸರು ಮಾಡಿದ ಮಹಾನಗರಿ ಬೆಂಗಳೂರು ಸ್ತಬ್ಧವಾಗಿತ್ತು.. ಮಾಧ್ಯಮದವರು ದೌಡಾಯಿಸಿ ನೇರ ಪ್ರಸಾರ ಮಾಡಿದರು .. ಇದರಿಂದ ಮತ್ತೂ  ವ್ಯಗ್ರರಾದ ಕಾನೂನನ್ನ ಅರೆದು ಕುಡಿದವರು, ಮಾಧ್ಯಮದವರ ಮೇಲೂ ತಿರುಗಿ ಬಿದ್ದರು.. ಮಾಧ್ಯಮದವರು, ಆ traffic  ನಲ್ಲಿ ಸಿಕ್ಕಿ ಹಾಕಿಕೊಂಡ ಜನರು ವಕೀಲರಿಗೆ ಹಿಡಿ ಶಾಪ ಹಾಕತೊಡಗಿದರು.. ಅಲಿಗೆ ಸುಮಾರು ಮುಷ್ಕರ  ಶುರುವಾಗಿ ೩-೪ ಘಂಟೆ ಆಗಿತ್ತು.. ಜನರ ತಾಳ್ಮೆ ಕಳೆದು ಕೊಳ್ಳಲರಂಭಿಸಿದರು.. ವಾಹನಗಳನ್ನ ಅಲ್ಲಿಯೇ ನಿಲ್ಲಿಸಿ ವಕೀಲರ ಜೊತೆ ವಾಗ್ವಾದಕ್ಕಿಳಿದರು.. ಅದಕ್ಕೋ ವಕೀಲರು ಜಗ್ಗಲಿಲ್ಲ .. ambulanceಗಳ ತಳಮಳ ಅರಣ್ಯ ರೋದನವಾಯಿತು. ಅಲ್ಲಿರುವ ರೋಗಿಯ ಸಂಬಂಧಿಕರರು ಬಂದು ಅಂಗಲಾಚಿದರೂ ಇವರ ಮನ ಕರಗಲಿಲ್ಲ..  ಇದರಿಂದ ಬೇಸತ್ತ ಆರಕ್ಷಕರು ವಾಟರ್ ಜೆಟ್ ಕಳುಹಿಸಿದರು.. ಅದರ ಮೇಲೆ ನುಗ್ಗಿದ ವಕೀಲರು ಅದರ ತ್ಯ್ರೆ ಗಾಳಿ ತೆಗೆದು ತಮ್ಮ ಆಕ್ರೋಶ  ವ್ಯಕ್ತಪಡಿಸಿದರು ..

ಕೊನೆಗೂ ಇವರ ಪ್ರತಿಭಟನೆಗೆ ಮಣಿದ ಪೋಲಿಸ್ ಆಯುಕ್ತರಿ ಆ ಪೇದೆಯನ್ನ ಅಮಾನತ್ತು ಗೊಳಿಸಿರುವುದಾಗಿ ಘೋಸಿಸಿದಾಗ ವಕೀಲರು ಗೆಲುವಿನ ಕೇಕೆ ಯೊಂದಿಗೆ ಪ್ರತಿಭಟನೆ ಹಿಂಪಡೆದರು.. ಸುಮಾರು ೭-೮ ಗಂಟೆಗೆ ಒತ್ತಡ ಕಡಿಮೆ ಆಯ್ತು..

ಈ ಘಟನೆಯನ್ನು ನೋಡಿದಾಗ ನಮ್ಮಲ್ಲಿ ಪ್ರಜಾಪ್ರಭುತ್ವದ ಕೊಲೆ ಆಗಿದೆಯ..? ಕಾನೂನು ಪಾಲಕರು, ಕಾನೂನನ್ನೇ ಕೊಲೆ ಮಾಡಿದರೆ? ಆರಕ್ಷಕರಿಗೆ ಜನಸಾಮಾನ್ಯರ ತೊದರೆ ಅರ್ಥ ಆಗಿಲ್ಲವೇ..? ಇವರಾರಿಗೂ ವೃದ್ಧರು, ಅನಾರೋಗ್ಯ ಪೀಡಿತರು,  ಮಕ್ಕಳು, ತಂದೆ ತಾಯಂದಿರ ಶಾಪ ತಟ್ಟಿಲ್ಲವೇ..? ಇವರಿಗೆ ಪ್ರತಿಭಟನೆ ಮಾಡುವುದಾದರೆ ಅದಕ್ಕಾಗೆ ಮೀಸಲಿಟ್ಟ ಜಾಗ ನೆನಪಾಗಿಲ್ಲವೇ..?  ಹೀಗೆ ಹಲವಾರು ಪ್ರಶ್ನೆಗಳು ಕಾಡುವುದು ಸಹಜ.. ಎಲ್ಲರೂ ಅವರವರ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋದರೆ ಇಂತಹ ಅಸಂಬದ್ದ ಕೆಲಸಗಳು ನಡೆಯುವುದಿಲ್ಲ.. ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಉದ್ಯಾನನಗರಿಯ ಮಾನ ಮರ್ಯಾದೆ ಹರಾಜಾಗದಿರಲಿ.. ಇನ್ನಾದರೂ ಇದು ಪುನರಾವರ್ತಿಸದಿರಲಿ ಅಂತ ಹಾರೈಸುತ್ತೇನೆ..
 

Wednesday, January 18, 2012

ನನ್ನ ಮಾವ ನಮ್ಮ ಮನೆಗೆ ಬಂದಾಗ..

ನಾವೆಲ್ಲ ಕನ್ನಡ ಶಾಲೆಗೇ ಹೋಗುತ್ತಿದ್ದ ಕಾಲವದು.. ೩-೪ನೆತ್ತಿ..
ನಮ್ಮ ಮನೆ, ಅದರ ಸ್ವಲ್ಪ ಕೆಳಗೆ ಹೋದರೆ ಅಡಿಕೆ ತೋಟ, ಇನ್ನೂ  ಸ್ವಲ್ಪ ಕೆಳಗೆ ಹೋದರೆ ಕೆಸರ ಗದ್ದೆ.. ಆಗ ನಮ್ಮ ಮನೆಯ ಒಕ್ಕಲವ ದುರ್ಗಪ್ಪ ಕೆಸರು ಗದ್ದೆಲಿ ಏನು ಮಾಡ್ತಾನೆ ನೋಡಬೇಕು ಅಂತ ನಾನು ಕೆಳಗೆ ಹಿತ್ತಲ ಕಂಟದ ಮೇಲೆ ಕುಳಿತು  ನೋಡ್ತಿದ್ದೆ .. ೮-೧೦ ಜನ ಕೆಲಸದಾಳುಗಳು.. ಭತ್ತದ ಗದ್ದೆಯಲ್ಲಿ ಕೆಲಸ ಮಾಡ್ತಿದ್ದರು.. ನಾನು  ಶಾಲೆಗೆ ಹೋಗಿಬಂದು ಕಂಟದ ಮೇಲೆ ಕುಳಿತು ಸ್ವಲ್ಪ ಹೊತ್ತು ನೋಡಿ ಊಟ ಮಾಡಿ ಮತ್ತೆ ಶಾಲೆಗೆ ಹೋಗಬೇಕಿತ್ತು..   ನನಗೆ ಸಿಗುವ ಸಮಯ ಸುಮಾರು ೩೦ ನಿಮಿಷ ಮಾತ್ರ.. ಶಾಲೆ ಇರುವುದು ಸುಮಾರು ೧ km ದೂರ.. ಅಂದ್ರೆ ಹೋಗಿ ಬರಲು ಸುಮಾರು ೨೦-೨೫ ನಿಮಿಷ ಬೇಕಾಗ್ತಿತ್ತು.. ಅದರಮಧ್ಯೆ ನಮ್ಮ ಊಟ, ಗದ್ದೆ ವೀಕ್ಷಣೆ ಎಲ್ಲ ನಡೆಯಬೇಕಾಗಿತ್ತು...ಇನ್ನೂ ಜಾಸ್ತಿ ಹೊತ್ತು ಅಲ್ಲೇ ಇದ್ರೆ ನನ್ನ ಅಪ್ಪ ಏನಾದರೂ ಕೆಲಸ ಹೇಳ್ತಿದ್ದ..


ನನಗೆ ನನ್ನ ಅಜ್ಜಿ ಮನೆ ಮೇಲೆ ತುಂಬಾ ಪ್ರೀತಿ.. ಅದರಲೋ ನನ್ನ ಮಾವನ್ದಿರಂದ್ರೆ ನನಗೆ ಅಚ್ಚುಮೆಚ್ಚು.. ನನ್ನ ಎರಡನೆ ಮಾವ  ನಾ ಶಾಲೆಗೆ ಹೋದಾಗ ನಮ್ಮ ಮನೆಗೆ ಬಂದಿದ್ದ.. ನಂಗೆ ಮಧ್ಯಾನ್ಹ ಊಟಕ್ಕೆ ಬಂದಾಗ ಗೊತ್ತಾಗಿದ್ದು ಅವ ಬಂದಿಂದ್ದು.. ಅವ ಗೆದ್ದೆಲಿ ಎಂತ ಕೆಲಸ ನಡೀತಿದೆ ಅಂತ ನೋಡಲು ಅದೇ ಹಿತ್ತಲ ಕಂಟದ ಮೇಲೆ ಕೂತು ನೋಡುತ್ತಿದ್ದ.. ಆಗ ನಾನು ಸುಮ್ಮನೆ ತಮಾಷೆಗೆ ಸುಮ್ಮನೆ ಅವನ ಹಿಂದೆ ಹೋಗಿ ಅವನನ್ನ ದೂಡಿದೆ.. ಅವನಿಗೂ ನಾ ಬಂದಿರುವುದು ಗೊತ್ತಿರಲಿಲ್ಲ .. ಹಿಂಗಾಗಿ ಅವ ಕಂಟದಿಂದ ಕೆಳಗೆ ಬಿದ್ದಿದ್ದ. ಅದು ಸುಮಾರು ೮-೧೦ ಅಡಿ ಆಳ ಇತ್ತು.. ನನಗೆ ಬಹಳ ಭಯ ಆಯ್ತು.. ಅಲ್ಲಿಂದ ಕಾಲ್ಕಿತ್ತೆ.. ಅವನಿಗೆ ಏನಾಯಿತು ಅಂತಲೂ ನೋಡಲಿಲ್ಲ.. ಸುಮ್ಮನೆ ಊಟಕ್ಕೆ ಬಂದು ಕುಳಿತೆ.. ಆಗ ನನ್ನ ಮಾವ ಮೆಲ್ಲನೆ ಸುಧಾರಿಸಿಕೊಂಡು ಬಂದ. ಅವನ ಅಕ್ಕನ ಹತ್ತಿರ ನಡೆದದ್ದೆಲ್ಲ ಹೇಳಿದ.. ನನಗೆ ಮಾತ್ರ ಊಟ ಮುಗಿದಿತ್ತು.. ನಮ್ಮ ಆಯಿಗೆ (ನಾ ಕರೆಯುವುದು ಅತ್ತಿಗೆ ಅಂತ, ನನ್ನ ಅಪ್ಪಚ್ಚಿ ಎಲ್ಲ ಕರಿದ್ರಿಂದ ಅದೂ ನಂಗೆ ಅಭ್ಯಾಸ )  ಸಿಕ್ಕ ಪಟ್ಟೆ ಸಿಟ್ಟು ಬಂತು.. ಒಂದು ಕೋಲು ಹಿಡಿದು ಓಡಿಸ್ಕೊಂಡು ಬಂದಳು  .. ನಾನು ರಸ್ತೆ ಹತ್ತಿ ಓಡಿದೆ..  ಅವಳಿಗೆ ಸಿಟ್ಟು ತಾಳಲಾರದೆ ಅಲ್ಲಿಂದಲೇ ಕಲ್ಲು ಬೀಸಿ ಹೊಡೆದಿದ್ದಳು.. ಅಂತೂ ತಪ್ಪಿಸಿಕೊಂಡು ಶಾಲೆಗೇ ಹೋದೆ.. ಬರುವ ಹೊತ್ತಿಗೆ ಪರಿಸ್ತಿತಿ ತಿಳಿಯಾಗಿತ್ತು..

ನಮ್ಮ ಕಟ್ಟಾ , ಯೇಡಿಯೂರಪ್ಪನವರ ಮನೆಗೆ ಭೇಟಿ ಇಟ್ಟಾಗ..

ಸ್ವಲ್ಪ ತಮಾಷೆಗಾಗಿ.......ಓದಿ ಎಂಜಾಯ್ ಮಾಡಿ. ಸಾಧ್ಯವಾದರೆ ನಿಮ್ಮ ಅಭಿಪ್ರಾಯ ತಿಳಿಸಿ.

ನಮ್ಮ ಯಡ್ಯೋರಪ್ಪನವರ ಮನೆ ರಾತ್ರಿ ೧೧:೦೦ ಘಂಟೆ
ಟಕ್..ಟಕ್..ಟಕ್..
ಯಾರ್ರಿ?
... ನಾನು ಸರ್ ಸೆಕ್ಯೂರಿಟಿ..
ಏನ್ರೀ ನಿಮ್ಮದು ಇಸ್ತೋತ್ನಲ್ಲಿ?
ಸರ್ ಅದು. ಅದು.. ನಿಮ್ಮನ್ನ ಹಿಡಿಕಿಕೊಂಡು ಯಾರೋ ಬಂದಿದ್ದಾರೆ. ಕಂಬಳಿ ಹೊಡ್ಕೊಂದಿದ್ದಾರೆ. ಎಲ್ಲೊ ನೋಡಿದ ಹಾಗಿದೆ ಗೊತ್ತಾಗ್ತಿಲ್ಲ . ತುರ್ತಾಗಿ ನಿಮ್ಮ ಹತ್ರ ಮಾತಾಡಬೇಕಂತೆ..
ಹುಂ. (ಕಿಟಕಿಯಿಂದ ಹೊರಗಡೆ ನೋಡುತ್ತಾ) ಅಯ್ಯೋ ಕಟ್ಟಾ. .. ಹೇಯ್ ಸೆಕ್ಯೂರಿಟಿ ಮೊದಲು ಅವರನ್ನ ಒಳಗೆ ಬಿಡ್ರಿ.. ಏನಪ್ಪಾ ನೀವು
ಯೆದ್ರು: ಬನ್ರಿ ಕಟ್ಟಾ.. ಬೇಗ ಒಳಗೆ ಬನ್ರಿ.. ಯಾರಾದ್ರೂ ನೋಡ್ಯಾರು.. ಯಾರು ನೋಡಿಲ್ಲ ತಾನೇ?..
ಕಟ್ಟಾ: ಉಸ್ಸಪ್ಪ.. ಇಲ್ಲ ಸರ್ ಯಾರು ನೋಡಿಲ್ಲ.. ಮನೆಯಲ್ಲಿ ಯಾರು ಇಲ್ವಲ್ಲ ಸರ್
ಯೆದ್ರು: ಇಲ್ಲ ಇಲ್ಲ.. ಇಗಸ್ಟೆ ಶೋಭಾ ಮನೆಗೆ ಹೋದಳು.. ಮೆತ್ಯೇನ್ರಿ ಕಟ್ಟಾ? ಬೇಗ ಏನು ಅಂತ ಹೇಳಿ ಹೊರಡ್ರಿ..
ಕಟ್ಟಾ: ಏನ್ ಸರ್ ಹಿಗಂತಿರಿ?.. ನನ್ ಒಬ್ನೇ ಜೈಲಲ್ಲಿರು ಅನ್ತಿದ್ದಿರ? ನಾನ್ ಒಬ್ನೆನ ದುಡ್ಡು ತಗೊಂಡಿರೋದು? ನಿಮಗೂ ಸ್ವಲ್ಪ ಕೊಟ್ತಿಲ್ವಾ?
ಯೆದ್ರು: ರೀ.. ಅದೆಲ್ಲ ಆವಾಗಾಯ್ತ್ರಿ? ನಿಮಗೆ ಮಂತ್ರಿ ಸ್ಥಾನ ಕೊಡುವಾಗಲೇ ಮಾತದಿಲ್ವೇನ್ರಿ?.. ಸರಿ ಈಗ ಬಂದಿದ್ದೇನು ಬೇಗ ಹೇಳಿ.
ಕಟ್ಟಾ: ಸರ್ ನನ್ನನ ಬಿಡಿಸೋಕೆ ಏನಾದ್ರು ಮಾಡಿ..
ಯೆದ್ರು: ಯಾಕ್ರೀ ನಿಮಗೆ ಜೈಳಲ್ಲೇ ಮನೆ ಫಾಸಿಲಿಟಿ ಕೊತ್ತಿಲ್ವೇನ್ರಿ?
ಕಟ್ಟಾ: ಸರ್ ಅದೆಲ್ಲ ಸರಿ.. ಆದರು ಇ ತರ ಕಳ್ಳನ ತರ ಬರಬೇಕಲ್ಲ?
ಯೆದ್ರು: ನೋಡ್ರಿ ಈಗ ನನ್ನ ಕಥೆನೇ ಗಂಭೀರವಾಗಿದೆ.. ರಾತ್ರೆ ಆ ಶೋಭಾ ಕೊಟ್ಟ ಮಾತ್ರೆಯಿಂದಲೂ ನಿದ್ರೆ ಬರ್ತಿಲ್ಲ.. ಯಾಕಾದ್ರೂ ಮಂಜುನಾಥನ ಮೇಲೆ ಆಣೆ ಪ್ರಮಾಣ ಅಂತ ಸುರುಮಾದ್ಕೊಂದ್ನೋ ಅನ್ನಿಸ್ತಿದೆ. ಏನೋ ಆ ವಿಚಾರದಲ್ಲದ್ರೂ ಸ್ವಲ್ಪ ಪ್ರಚಾರ ಸಿಗ್ಲಿ ನೋಡಿದೆ.
ಕಟ್ಟಾ: ಯಾರು ಸರ್ ನಿಮಗೆ ಇದರ ಬಗ್ಗೆ ಐಡಿಯಾ ಕೊಟ್ಟೋರು?
ಯೆದ್ರು: ಅದು.. ಅದು.. ಬಿಡ್ರಿ ಈಗ ಅದೆಲ್ಲ ಯಾಕೆ.. ನೀವು ಎಲ್ಲೊ ಬಾಯಿ ಬಿಡಲ್ಲ ಅಂದ್ರೆ ಹೇಳ್ತಿನಪ್ಪ..
ಕಟ್ಟಾ: ಏನ್ ಸರ್ ನನ್ನ ಮೇಲೆ ಅಷ್ಟೊಂದು ನಂಬಿಕೆ ಇಲ್ವಾ. ನಾವಿಬ್ಬರೂ ಸೇರಿ ಏನೆಲ್ಲ ಮಾಡಿದ್ದಿವಿ.. ಹೇಳಿ ಸರ್..
ಯೆದ್ರು: ಅದು ಸರಿ.. ಕೈಗಾರಿಕೆ ಹೆಸರಲ್ಲಿ ಎಷ್ಟೆಷ್ಟು ಎಕರೆ ದೇ-ನೋತಿಫ್ಯ್ ಮಾಡಿದ್ದೀವಿ.. ಅದೇರಿ ನಮ್ಮ ಶೋಭಾ ಹೇಳ್ದ್ಲು ಅಂತ ಪ್ರಮಾಣ ಮಾಡೋಣ ಅಂದ್ಬಿಟ್ಟೆ... . ಅಷ್ಟೇ ಅಲ್ಲರೀ ನಾನು ಕೇರಳದಲ್ಲಿ ಕೆಲವು ಮಂತ್ರವಾದಿಯನ್ನೂ ಕೇಳೆ ಮಾಡಿದ್ದು.. ಆದರು ಈ ರೀತಿ ಆಗ್ಹೋಯ್ತು... ಹೊರಗಡೆ ಮುಖ ಯೆತ್ತೊಕಾಗ್ತಿಲ್ಲ..
ಕಟ್ಟಾ: ಈಗ ಆ ಮಂತ್ರವಾದಿಗಳು ಏನಂತಾರೆ?
ಯೆದ್ರು: ಎಲ್ಲಿ ಮಂತ್ರವಾದಿ!!!!!!!! ನಾಪತ್ತೆಯಾಗಿಹೋಗಿದ್ದಾರೆ...ಎಲ್ಲ ಕುರ್ಚಿ ಇದ್ರೆ ಇರ್ತಾರೆ.. ಏನೋ ೩ ವರ್ಷ ಆದರು ಸಿಕ್ತಲ್ಲ.. ಕೋಟಿ ಕೋಟಿ ಇದ್ರೂ ಅನುಭವಿಸಲಾರದ ಸ್ಥಿತಿ....
ಕಟ್ಟಾ: ಮುಂದೇನು ಸರ್ ಕಥೆ? ಸದಾನಂದ ಏನಂತಾನೆ?
ಯೆದ್ರು: ಅವನೇನೋ ಹೆಲ್ಪ್ ಮಾಡಬಹುದು.. ಆದ್ರೆ ಈ ಲೋಕಾಯುಕ್ತರು ಬಿಡಬೇಕಲ್ರಿ.. ಮೊನ್ನೆ ಹೋಗಿದ್ದ.. ಕೇಳಿದನಂತೆ.. ನೀವು ಸುಮ್ನಿರಿ ಅದರ ಬಗ್ಗೆ ತಲೆ ಹಾಕಬೇಡಿ ಅಂದರಂತೆ...ಅವನ್ಯಾರು ತಿಲಕ್ ಅಲ್ವೇನ್ರಿ? ಅದೇ ಹೋಸ್ಪಿಟಲ್ superintendent ? ಹೇಗೆ ಅವನು?
ಕಟ್ಟಾ: ಓಕೆ ಸರ್. ಆದ್ರೆ ತುಂಬಾ ಕಾಸ್ಟ್ಲಿ. ..ಒಂದು ಸಲ ಹೊರಗೆ ಬರಬೇಕು ಅಂದ್ರೆ ಲಕ್ಷ ಕೇಳ್ತಾನೆ...ನಿಮಗೆ ಯಾಕೆ ಸರ್?
ಯೆದ್ರು:ಏನಿಲ್ಲ ಸುಮ್ನೆ ಕೇಳ್ದೆ.... ಹೇಗೆ ಅವನು? ನಂಬಬಹುದ?.. ಎಲ್ಲೂ ಹೊರಗಡೆ ಬಾಯಿ ಬಿಡಲ್ವ? ..
ಕಟ್ಟಾ: ಹೇ ಹಾಗೇನಿಲ್ಲ ಸರ್.. ನಂಬಿಕಸ್ತ.... ಆದ್ರೆ... ಹೌದು ನಿಮಗ್ಯಾಕೆ ಸರ್?
ಯೆದ್ರು: ಸರಿ ಮುಂದೆ ನೋಡೋಣ ಏನಾಗುತ್ತೋ ಅಂತ.. ನೀವು ಬೇಗ ಹೊರಡ್ರಿ...
ಕಟ್ಟಾ: ಸರಿ ಸರ್.
ಎದ್ರು: ಸರಿ ಸರಿ ಹೊರಡಿ.. ಹಾ.. ಆ ತಿಲಕ್ ನಂಬರ್ ಇದ್ರೆ ಕೊಡಿ.. ಹಾಗೆ ಆ ಜೈಲರ್ ನಂಬರ್ ನನ್ನ ಪಿ ಎ ಹತ್ರ.. ಬೇಡ ಬೇಡ .. ನನ್ಹತ್ರನೆ ಕೊಡಿ..
ಕಟ್ಟಾ: ನಿಮಗ್ಯಾಕೆ ಸರ್?
ಎದ್ರು: ಏನಿಲ್ಲ ನಿಮ್ಮ ಬಗ್ಗೆ ಮಾತಾಡೋಕೆ..
ಕಟ್ಟಾ: ಸರಿ ಸರ್ ತಗೊಳ್ಳಿ.. ಬರ್ತೀನಿ ಸರ್.. ಏನೋ ಹೆಲ್ಪ್ ಮಾಡಿ.
ಎದ್ರು: ಸರಿ ಸರಿ.. ಯಾರಿಗೂ ಕಾಣಿಸ್ದಾಗೆ ಹೋಗಿ.. ಪದೇ ಪದೇ ಬರಬೇಡಿ.

ಯೆಡಿಯೂರಪ್ಪ ಮತ್ತು ಕುಮಾರಸ್ವಾಮಿ ಹೀಗೊಮ್ಮೆ ಹಲೋ ಅಂದಾಗ ...

ಹಲೋ ಯಾರು ಯಡಿಯೂರಪ್ಪನವರ?
ಆಕಡೆಯಿಂದ: ಅಲ್ಲ.. ನಾನು ಅವರ ಪಿ ಎ.. ನೀವ್ಯಾರು ಮಾತಾಡ್ತಿರೋದು?
ನಾನು ಕಣಮ್ಮ ಕುಮಾರಸ್ವಾಮಿ.. ನೀನು ಶೋಭಾ ಅಲ್ವಾ? (ಪಿಸುದ್ವನಿಯಿಂದ)
ಶೋಬಕ್ಕ : ಅದಿರ್ಲಿ ಏನಾಗಬೇಕು.. ಅಪರೂಪಕ್ಕೆ ಫೋನ್ ಮಾಡಿದ್ದೀರಾ? ಇದು ಯಾರ ನುಮ್ಬೇರ್ರು?
...ಕುಮಾರಸ್ವಾಮಿ: ಸುಮ್ನಿರಮ್ಮ ನಂದೇ ಅತಿ ಪರ್ಸನಲ್ ನುಮ್ಬೇರ್ರು. ಮತ್ತೆ ಯದ್ಯೋರಪ್ಪರಿಗೆ ಹೇಗಿದ್ಯಮ್ಮ?
ಶೋಭಕ್ಕ: ಅಯ್ಯೋ ಸುಮ್ನಿರಿ ಸ್ವಾಮಿ.. ನಿಮಗೆ ಗೊತ್ತಿಲ್ದಿರೋದು ಏನಿದೆ? ಆ ಸಂತೋಷ್ ಹೆಗ್ಡೆ ಕುರ್ಚಿಯಿಂದ ಇಳಿಸಿದರು ಅಂದ್ರೆ ಈ ಪಾಟೀಲರು ಜೈಲಿಗೆ ಕಲಿಸೋಕ್ಕೆ ತಯ್ಯಾರಿ ನಡೆಸ್ತಿದ್ದಾರೆ.. ಅದಕ್ಕೆ ಏನೋ ವೊಂದು. ಹೇಗೂ ಸಾಗರ ಆಸ್ಪತ್ರೇಲಿ ನಮಗೆ ಗೊತ್ತಿರೋ ಡಾಕ್ಟ್ರೆ ಇದ್ದಾರೆ.. ಇವರಿಗೂ ವಯಸ್ಸಾಗಿದೆ.. ಏನೋ ಒಂದು ಸರ್ಟಿಫಿಕೇಟ್ ಕೊಡ್ತಾರೆ.. ಅದನ್ನ ಕೋರ್ಟಿಗೆ ಕೊಟ್ರೆ.. ಏನಾದ್ರು ಹೆಲ್ಪ್ ಆಗಬಹುದು ಅಂತ. ಅದು ಸರಿ ನಿಮ್ಮ ಕತೆ?
ಸ್ವಾಮಿ: ಅಯ್ಯೋ ನಂದು ಅದೇ ಕಣಮ್ಮ. ಸುಮ್ಸುಮ್ನೆ ಆಣೆ ಪ್ರಮಾಣ ಅಂತ ಹೋಗಿ ಇಬ್ರೂ ಜೈಲಿಗೆ ಹೋಗೋ ಪರಿಸ್ತಿತಿ ಬಂದಿದೆ.. ಆ ಮಂಜುನಾಥ ಸ್ವಾಮಿ ಇಸ್ಟೊಂದು ಸ್ಟ್ರಾಂಗ್ ಅಂತ ಗೊತ್ತಿರಲಿಲ್ಲ ಕಣಮ್ಮ.. ನಾನೂ ಅಂತದೆ ಏನಾದ್ರು ನೆಪ ಹುಡಕಬೇಕು. ನನ್ನ ಧರ್ಮ ಪತ್ನಿಗೂ ನೆಪ ಹುಡುಕಬೇಕು. ಎಲ್ಲ ಗ್ರಹಚಾರ.. ಸರಿ yedru ಯೆನ್ಮಾಡ್ತಿದ್ದರೆ?
ಶೋಭಕ್ಕ: ಅವರಿಗೆ ಫುಲ್ ಟೆನ್ಶನ್ ಆಗಿ ಕೂಗಾಡ್ತಿದ್ರು.. ಹೋಗ್ಲಿ ನನ್ಮೇಲೆ ಯಾಕೆ ಕೂಗಡ್ತಿರ ಅಂದೆ. ಯಾವುದಕ್ಕೂ ಸುಮ್ನೆ ಬಿದ್ದಿರಲಿ ಅಂತ ನಿದ್ರೆ ಮಾತ್ರೆ ಹಾಕಿ ಮಲಗಿಸಿದ್ದೇನೆ..
ಸ್ವಾಮಿ: ಸರಿ ಎದ್ದ ಮೇಲೆ ನಂಗೆ ಫೋನ್ ಮಾಡೋಕೆ ಹೇಳಮ್ಮ. ಹ. ಮತ್ತೆ ಇ ವಿಷಯ ಗುಟ್ತಾಗಿರ್ಲಿ.. ಮತ್ತ್ಯೆಲಾದ್ರು ಮೀಡಿಯಾ ಮುಂದೆ ಬಯ್ಬಿಟ್ಟಿಯ.. ಹುಶಾರಮ್ಮ.
ಶೋಭಕ್ಕ: ಆಯ್ತು ಬಿಡಿ.. ಸರಿ.. ಹುಷಾರು..